ಗೋಲ್ಡನ್‌ ಬ್ಯೂಟಿ ಪಾರ್ಲರ್ – ಮೇಕಪ್‌ ಅಕಾಡೆಮಿ ಶುಭಾರಂಭ

0

p>

ಬೆಳ್ತಂಗಡಿ: ಗೋಲ್ಡನ್ ಬ್ಯೂಟಿ ಪಾರ್ಲರ್ & ಮೇಕಪ್ ಅಕಾಡೆಮಿ (ಫ್ಯಾನ್ಸಿ ಮತ್ತು ಟೈಲರಿಂಗ್) ಉದ್ಘಾಟನಾ ಸಮಾರಂಭವು ಜ. 11 ರಂದು ಹಳೆಕೋಟೆ ವಾಣಿ ಕಾಲೇಜು ಎದುರುಗಡೆ ಆಧ್ಯ ಕಾಂಪ್ಲೆಕ್ಸ್ (ಪ್ರಥಮ ಮಹಡಿ) ನಲ್ಲಿ ಶುಭಾರಂಭಗೊಂಡಿದೆ.

ಉದ್ಘಾಟನೆಯನ್ನು ಬೆಳ್ತಂಗಡಿ ಸ. ಪ್ರ. ದರ್ಜೆ ಕಾಲೇಜು ಪ್ರಾಂಶುಪಾಲರು ಸುರೇಶ್ ನೆರವೇರಿಸಿ ಶುಭಕೋರಿದರು. ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಬೆಳ್ತಂಗಡಿ ಇಕೋ ಪ್ರೇಶ್ ಮಾಲಕ ರಾಕೇಶ್ ಹೆಗ್ಡೆ, ಬೆಳ್ತಂಗಡಿ ಬ್ಯೂಟಿಪಾರ್ಲರ್ ಅಸೋಸಿಯೇಶನ್‌ ಅಧ್ಯಕ್ಷೆ ರಮ್ಮಿತಾ ಆಳ್ವ, ವಾಣಿ ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗ ಮುಖ್ಯಸ್ಥ ಶಂಕರ ರಾವ್, ಹಳೆಕೋಟೆ ಆಧ್ಯ ಕಾಂಪ್ಲೆಕ್ಸ್ ಮಾಲಕ ಅಶ್ವತ್ಥ ಕುಮಾ‌ರ್ ದೀಪ ಪ್ರಜ್ವಲನೆಗೊಳಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶಾಂತಾ ಬಂಗೇರ ಪ್ರಶಾಂತಿ ಬ್ಯೂಟಿ ಪಾರ್ಲರ್, ಜೋರ್ಡನ್ ರೀವರ್ ಫ್ಯಾಮೀಲಿ ರೆಸ್ಟೋರೆಂಟ್ ಮಾಲಕ ಅಶ್ವಿನಿ ಡಿಸೋಜ, ಬೆಳ್ತಂಗಡಿ ಟೈಲರಿಂಗ್‌ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ಕೋಟ್ಯಾನ್ ಉಪಸ್ಥಿತರಿದ್ದು, ಶುಭಹಾರೈಸಿದರು. ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕ ಜಯಮಾಲಾ ಯೋಗೀಶ್ ಸ್ವಾಗತಿಸಿ, ಸತ್ಕರಿಸಿದರು.

LEAVE A REPLY

Please enter your comment!
Please enter your name here