p>
ಬೆಳ್ತಂಗಡಿ: ಆರೋಪಿ ಕಡಿರುದ್ಯಾವರ ಗ್ರಾಮದ ಸುಂದರ ಗೌಡ ಉಜಿರೆ ಗ್ರಾಮದ ಪಣಿಕ್ಕಲ್ ಮನೆಯ ಚಂದ್ರಶೇಖರರವರಿಂದ 5,35,000 ಕೈ ಸಾಲ ಪಡಕೊಂಡಿದ್ದು, ಸದ್ರಿ ಸಾಲವನ್ನು ಮರುಪಾವತಿ ಮಾಡಲು ರೂ. 5,30,000 ಚೆಕ್ಕನ್ನು ಚಂದ್ರಶೇಖರರವರಿಗೆ ನೀಡಿದ್ದು, ಸದ್ರಿ ಚೆಕ್ಕನ್ನು ನಗದೀಕರಣಕ್ಕಾಗಿ ಬ್ಯಾಂಕ್‌ಗೆ ಹಾಜರು ಪಡಿಸಿದಾಗ ಖಾತೆಯಲ್ಲಿ ಸಾಕಷ್ಟು ಹಣವಿಲ್ಲವೆಂದು ಹಿಂದಿರುಗಿಸಿರುತ್ತಾರೆ.
ಆದ ಕಾರಣ ಬೆಳ್ತಂಗಡಿ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಜೆ. ಎಂ. ಎಫ್. ಸಿ. ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಿ, ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪ ಸಾಬೀತು ಆಗದೇ ಇರುವುದರಿಂದ ಆರೋಪಿಯನ್ನು ದೋಷ ಮುಕ್ತಗೊಳಿಸಿ ಜ. 4 ರಂದು ನ್ಯಾಯಾಧೀಶ ಮನು ಬಿ. ಕೆ. ತೀರ್ಪು ನೀಡಿರುತ್ತಾರೆ. ಆರೋಪಿಯ ಪರವಾಗಿ ವಕೀಲರಾದ ಗಣೇಶ್ ಗೌಡ ಮತ್ತು ಪ್ರಶಾಂತ್ ಎಮ್. ವಾದಿಸಿದ್ದರು.