ಬೆಳ್ತಂಗಡಿ: ಬಂಗೇರ ಬ್ರಿಗೇಡ್ ಆಶ್ರಯದಲ್ಲಿ ಬಿನುತಾ ಬಂಗೇರರವರ ಸಾರಥ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ.) ಸಹಭಾಗಿತ್ವದಲ್ಲಿ ಮಾಜಿ ಶಾಸಕ ಬೆಳ್ತಂಗಡಿಯ ಅಭಿವೃದ್ಧಿ ಹರಿಕಾರರೂ ಕೀರ್ತಿಶೇಷ ಕೆ. ವಸಂತ ಬಂಗೇರರವರ 79ನೇ ಹುಟ್ಟುಹಬ್ಬದ ಪ್ರಯುಕ್ತ ಹೊನಲು ಬೆಳಕಿನ ಪುರುಷರ ಮುಕ್ತ ಹಾಗೂ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಮ್ಯಾಟ್ ಕಬಡ್ಡಿ ಪಂದ್ಯಾಟ ಜ. 15 ರಂದು ಬೆಳಿಗ್ಗೆ 9:30 ರಿಂದ ಬಂಡಿಮಠ ಮೈದಾನ, ಮದ್ದಡ್ಕದಲ್ಲಿ ನಡೆಯಲಿದೆ.
ಪ್ರವೇಶ ಶುಲ್ಕ 500/- ಪುರುಷರ ಮುಕ್ತ ವಿಭಾಗ ಪ್ರಥಮ : ರೂ. 30,000/- ನಗದು ಮತ್ತು ಬಂಗೇರ ಬ್ರಿಗೇಡ್ ಟ್ರೋಫಿ, ದ್ವಿತೀಯ : ರೂ. 20,000/- ನಗದು ಮತ್ತು ಬಂಗೇರ ಬ್ರಿಗೇಡ್ ಟ್ರೋಫಿ, ತೃತೀಯ : ರೂ. 10,000/- ನಗದು ಮತ್ತು ಬಂಗೇರ ಬ್ರಿಗೇಡ್ ಟ್ರೋಫಿ, ಚತುರ್ಥ : ರೂ. 10,000/- ನಗದು ಮತ್ತು ಬಂಗೇರ ಬ್ರಿಗೇಡ್ ಟ್ರೋಫಿ, ಜಿಸ್ಟ್ ರೈಡರ್, ಬೆಸ್ಟ್ ಕ್ಯಾಚರ್, ಆಲ್ ರೌಂಡರ್ ಹಾಗೂ ಶಿಸ್ತಿನ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಹಿಸಲಾಗುವುದು.
ಪ್ರೌಢ ಶಾಲಾ ಬಾಲಕ-ಬಾಲಕಿಯರ ವಿಭಾಗ ಪ್ರಥಮ : ರೂ.10,000/- ನಗದು ಮತ್ತು ಬಂಗೇರ ಬ್ರಿಗೇಡ್ ಟ್ರೋಫಿ, ದ್ವಿತೀಯ : ರೂ. 7,000/- ನಗದು ಮತ್ತು ಬಂಗೇರ ಬ್ರಿಗೇಡ್ ಟ್ರೋಫಿ ತೃತೀಯ : ರೂ. 5,000/- ನಗದು ಮತ್ತು ಬಂಗೇರ ಬ್ರಿಗೇಡ್ ಟ್ರೋಫಿ, ಚತುರ್ಥ: ರೂ. 5,000/- ನಗದು ಮತ್ತು ಬಂಗೇರ ಬ್ರಿಗೇಡ್ ಟ್ರೋಫಿ ಬೆನ್ಸ್ ರೈಡರ್, ಟೆಸ್ಟ್ ಕ್ಯಾಟರ್, ಆಲ್ ರೌಂಡರ್ ಹಾಗೂ ಶಿಸ್ತಿನ ತಂದಕ್ಕೆ ಪ್ರಶಸ್ತಿ ನೀಡಿ ಗೌರವಹಿಸಲಾಗುವುದು. ಟೂರ್ನಿಯಲ್ಲಿ ಭಾಗವಹಿಸಿದ ಪ್ರತಿಯೊಂದು ಹೈಸ್ಕೂಲಿನ ತಂಡಗಳಿಗೆ ಶಾಶ್ವತ ಘಟಕ ಮತ್ತು ಸೆಮಿಫೈನಲ್ ತಲುಪಿದ ತಂಡಗಳ ಸದಸ್ಯರಿಗೆ ಪ್ರಶಸ್ತಿ ಪತ್ರ ನೀಡಲಾಗುತ್ತದೆ.
ತಂಡದ ನೋಂದಾವಣೆಗೆ ಕೊನೆಯ ದಿನಾಂಕ ಜ. 12, ಜ. 13 ರಂದು ಸಂಜೆ 5:00 ಗಂಟೆಗೆ ಪಿಚ್ಚರ್ಸ್ ತೆಗೆಯಲಾಗುವುದು, ಪ್ರೌಢ ಶಾಲಾ ವಿಭಾಗದ ಪಂದ್ಯಾಟ ಬೆಳಿಗ್ಗೆ 9.30ಕ್ಕೆ ಹಾಗೂ ಪುರುಷರ ಮುಕ್ತ ವಿಭಾಗದ ಪಂದ್ಯಾಟ ಸಮಯ ಸಂಜೆ 5.30ಕ್ಕೆ ಸರಿಯಾಗಿ ಪ್ರಾರಂಭವಾಗುವುದು.
ನಿಯಮಗಳು: ಅಶಿಸ್ತಿನ ತಂಡವನ್ನು ನಿರ್ದಾಕ್ಷಿಣ್ಯವಾಗಿ ಹೊರಗಿಡಲಾಗುವುದು, ಪ್ರೌಢ ಶಾಲಾ ವಿಭಾಗಕ್ಕೆ ಪ್ರವೇಶ ಶುಲ್ಕವಿರುವುದಿಲ್ಲ, ಹಾಗೂ ಪುರುಷರ ಮುಕ್ತ ವಿಭಾಗದ ಪ್ರವೇಶ ಶುಲ್ಕವನ್ನು ಹಿಂತಿರುಗಿಸಲಾಗುವುದು, ಸಂಘಟಕರ ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮ. ಆಟಗಾರರಿಗೆ ಮತ್ತು ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆ ಇರುತ್ತದೆ.
ಸಂಪರ್ಕ ಸಂಖ್ಯೆ: 9663883202, 7795217098 -ಅಧ್ಯಕ್ಷರು, ಪಧಾಧಿಕಾರಿಗಳು ಹಾಗೂ ಸರ್ವಸದಸ್ಯರು, ಬಂಗೇರ ಬ್ರಿಗೇಡ್ ಬೆಳ್ತಂಗಡಿ