ಬೆಳ್ತಂಗಡಿ: ತಾಲೂಕು ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಜ. 4 ರಂದು ಸಂಘದ ಅಧ್ಯಕ್ಷ ಚೈತ್ರೇಶ್ ಇಲಂತಿಳ ಇವರ ಅಧ್ಯಕ್ಷತೆಯಲ್ಲಿ ಪತ್ರಿಕಾ ಭವನದಲ್ಲಿ ನಡೆಯಿತು.
2025 ನೇ ಸಾಲಿಗೆ ಅಧ್ಯಕ್ಷರಾಗಿ ಈ ಸಂಜೆ ಪತ್ರಿಕೆಯ ವರದಿಗಾರ ಪ್ರಸಾದ್ ಶೆಟ್ಟಿ ಏನಿಂಜೆ, ಕಾರ್ಯದರ್ಶಿಯಾಗಿ ಸುದ್ದಿ ಉದಯ ಪತ್ರಿಕೆಯ ತುಕಾರಾಮ್ ಬಿ., ಕೋಶಾಧಿಕಾರಿಯಾಗಿ ಸುದ್ದಿಬಿಡುಗಡೆ ಪತ್ರಿಕೆಯ ಜಾರಪ್ಪ ಪೂಜಾರಿ ಬೆಳಾಲು ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಸಂತೋಷ್ ಪಿ. ಕೋಟ್ಯಾನ್, ಜತೆ ಕಾರ್ಯದರ್ಶಿಯಾಗಿ ಧನಕೀರ್ತಿ ಅರಿಗ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಹಿರಿಯ ಸದಸ್ಯ ನಾಭಿರಾಜ್ ಪೂವಣಿ ಪ್ರಕ್ರಿಯೆ ನಡೆಸಿದರು.
ನಿಕಟಪೂರ್ವ ಉಪಾಧ್ಯಕ್ಷ ಶಿಬಿ ಧರ್ಮಸ್ಥಳ, ಮನೋಹರ ಬಳಂಜ, ಜಿಲ್ಲಾ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ ಸದಸ್ಯರುಗಳಾದ ಮಂಜುನಾಥ ರೈ, ಅರವಿಂದ ಹೆಬ್ಬಾರ್, ಆಚುಶ್ರೀ ಬಾಂಗೇರು, ಬಿ. ಎಸ್. ಕುಲಾಲ್, ದೀಪಕ್ ಅಠವಳೆ, ಹೃಷಿಕೇಶ್ ಧರ್ಮಸ್ಥಳ ಉಪಸ್ಥಿತರಿದ್ದರು. ಈ ಮೊದಲು ನಡೆದ ಮಹಾಸಭೆಯಲ್ಲಿ ಸಂಘದ ಕಾರ್ಯದರ್ಶಿ ಗಣೇಶ್ ಶಿರ್ಲಾಲ್ ಸ್ವಾಗತಿಸಿ, ವರದಿ ವಾಚಿಸಿದರು. ಕೋಶಾಧಿಕಾರಿ ಪುಷ್ಪರಾಜ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು.