ಮದ್ದಡ್ಕ ಬಂಡಿಮಠ ಬಸ್ ನಿಲ್ದಾಣದ ಚರಂಡಿಯಲ್ಲಿ ಕೊಳಚೆ ನೀರಿನ ಉತ್ಪತ್ತಿ – ಚರಂಡಿ ಸುವ್ಯವಸ್ಥೆಗೆ ಸಾರ್ವಜನಿಕರ ಒತ್ತಾಯ

0

p>

ಕುವೆಟ್ಟು: ಮದ್ದಡ್ಕ ಬಂಡಿಮಠ ಮೈದಾನದ ಪಕ್ಕದಲ್ಲಿರುವ ಬಸ್ ನಿಲ್ದಾಣದ ಬದಿಯ ಚರಂಡಿಯಲ್ಲಿ ಕೊಳಚೆ ನೀರು ಶೇಖರಣೆಯಾಗುತ್ತಿದ್ದು, ಸೊಳ್ಳೆಗಳ ಉತ್ಪತ್ತಿಗೆ ತಾಣವಾಗುತ್ತಿದೆ.

ಪೇಟೆಯ ಚರಂಡಿಯಲ್ಲಿ ಹುಲ್ಲು ಗಿಡ ಗಂಟ್ಟಿಗಳು ಬೆಳೆದು ಅವ್ಯವಸ್ಥೆಯಿಂದಾಗಿ ಕೊಳಚೆ ನೀರು ಅಲ್ಲಿ ಅಲ್ಲಿ ಸಂಗ್ರವಾಗುತ್ತಿದೆ. ಚರಂಡಿಯು ತೆರೆದ ಸ್ಥಿತಿಯಲ್ಲಿ ಇರುವುದರಿಂದ, ದುರ್ವಾಸನೆ ಬರುವುದರಿಂದ ಬಸ್ಸಿಗೆ ಕಾಯುವ ಪ್ರಯಾಣಿಕರು ಹಾಗೂ ರಿಕ್ಷಾ ಚಾಲಕರು ಸಾಂಕ್ರಾಮಿಕ ರೋಗ ಹರಡುವ ಭಯ ಭೀತಿಯಲ್ಲಿದ್ದಾರೆ.

ಈ ಬಗ್ಗೆ ಸ್ಥಳೀಯ ಆಡಳಿತ ಹಾಗೂ ಆರೋಗ್ಯ ಇಲಾಖೆ ಕೂಡಲೇ ಗಮನಹರಿಸುವಂತೆ ಸಾರ್ವಜನಿಕರ ಒತ್ತಾಯವಾಗಿದೆ.

LEAVE A REPLY

Please enter your comment!
Please enter your name here