p>
ಬೆಳ್ತಂಗಡಿ: ಡಿ. 30 ರಂದು ಹೊಸಂಗಡಿ ಗ್ರಾಮದ ಪಡ್ಡಂದಡ್ಕ ಜನತಾ ಕಾಲೋನಿಯಿಂದ ಕಟ್ಟೆವರೆಗೆ ಸಂಪರ್ಕಿಸುವ ರಸ್ತೆ ದುರಸ್ಥಿಗೆ ಆಗ್ರಹಿಸಿ ಎಸ್. ಡಿ. ಪಿ. ಐ ಪಡ್ಡಂದಡ್ಕ ಬ್ರಾಂಚ್ ಸಮಿತಿ ವತಿಯಿಂದ ಹೊಸಂಗಡಿ ಪಂಚಾಯತ್ ಅಧ್ಯಕ್ಷ ಜಗದೀಶ್ ಆರ್. ಹೆಗ್ಡೆ ರವರಿಗೆ ಸೋಮವಾರ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಎಸ್. ಡಿ. ಪಿ. ಐ ಪಡ್ಡಂದಡ್ಕ ಬ್ರಾಂಚ್ ಸಮಿತಿ ಅಧ್ಯಕ್ಷ ಸಲ್ಮಾನ್ ಪಡ್ಡಂದಡ್ಕ, ವೇಣೂರು ಬ್ಲಾಕ್ ಸಮಿತಿ ಸದಸ್ಯರು ಜುನೈದ್ ಪಡ್ಡಂದಡ್ಕ, ರಫೀಕ್ ಪಡ್ಡಂದಡ್ಕ, ಇಮ್ತಿಯಾಜ್,
ಸಾದಿಕ್, ಜುನೈದ್ ಬೆಂಗಳೂರು ನಿಸಾರ್, ನಾಸೀರ್ ಕುರ್ಲೊಟ್ಟು, ಸುಲೈಮಾನ್, ಉಪಸ್ಥಿತರಿದ್ದರು.
ಪಂಚಾಯತ್ ಅಧ್ಯಕ್ಷ ಜಗದೀಶ್ ಆರ್. ಹೆಗ್ಡೆ ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.