ಶಿಶಿಲ :ಸೇವಾಭಾರತಿ (ರಿ) ಕನ್ಯಾಡಿ ಇವರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಶ್ರೀ ದುರ್ಗಾಪರಮೇಶ್ವರಿ ಯುವಕಮಂಡಲ (ರಿ) ವೈಕುಂಠಪುರ ಶಿಶಿಲ ಮತ್ತು ಗ್ರಾಮ ಪಂಚಾಯತ್ ಶಿಶಿಲ ಇವುಗಳ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ 29 ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಡಿ. 28 ರಂದು ಯುವಕ ಮಂಡಲದ ಕಟ್ಟಡದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸೇವಾಭಾರತಿ (ರಿ)ಕನ್ಯಾಡಿ ಇದರ ಅಧ್ಯಕ್ಷೆ ಸ್ವರ್ಣಗೌರಿ ವಹಿಸಿ ಕಲಿತ ವಿದ್ಯೆಯನ್ನು ಬಳಸಿ ಸ್ವಾವಲಂಬಿ ಜೀವನ ನಡೆಸಲು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಶ್ರೀ ದುರ್ಗಾ ಮಾತೃ ಮಂಡಳಿ ಕನ್ಯಾಡಿ ಇದರ ಅಧ್ಯಕ್ಷೆ ಶಾಂತಾ ಪಿ. ಶೆಟ್ಟಿ , ಚಾಮುಂಡೇಶ್ವರಿ ದೇವಾಲಯದ ಟ್ರಸ್ಟಿಗಳಾದ ಚಂದ್ರಾವತಿ, ಯುವಕ ಮಂಡಲದ ಸಲಹೆಗಾರ ಚೆನ್ನಪ್ಪ ಕೆ. ಎಂ., ತರಬೇತುದಾರರಾದ ವಿನಯಾ ಶೆಂಡ್ಯೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತರಬೇತಿ ನೀಡಿದ ವಿನಯಾ ಶೆಂಡ್ಯೆ ಇವರಿಗೆ ಶಿಬಿರಾರ್ಥಗಳಿಂದ ಗೌರವಾರ್ಪಣೆ ನಡೆಯಿತು.
ಸೇವಾಭಾರತಿಯ ಮೋಹನ್ ನಿಡ್ಲೆ ಸ್ವಾಗತಿಸಿದರು. ಶಿಬಿರಾರ್ಥಿ ಕಾವ್ಯಾ ಅನಿಸಿಕೆ ವ್ಯಕ್ತ ಪಡಿಸಿದರು. ಮೀನಾಕ್ಷಿ ಸನ್ಮಾನ ಪತ್ರ ವಾಚಿಸಿದರು. ದಾಖಲಾತಿ ಸಂಯೋಜಕಿ ಸುಮಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಸೇವಾಭಾರತಿಯ ಲೆಕ್ಕಾಧಿಕಾರಿ ಅಕ್ಷತಾ ಧನ್ಯವಾದವಿತ್ತರು.