ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘ – ಸದಸ್ಯತ್ವ ಅಭಿಯಾನ

0

ಬೆಳ್ತಂಗಡಿ: ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘ ನಿಯಮಿತ ಕರ್ನಾಟಕ ರಾಜ್ಯ ಇದರ ಕಛೇರಿಯನ್ನು ಬೆಳ್ತಂಗಡಿ ತಾಲೂಕಿನ ಕಾರ್ಯವ್ಯಾಪ್ತಿಯ ವಿಕಲಚೇತನ ಫಲಾನುಭವಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಇತರ ಕ್ಷೇತ್ರಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರ ಸಂಘದ ಕಛೇರಿಯನ್ನು ಪ್ರಾರಂಭಿಸುವ ಕುರಿತು “ಸದಸ್ಯತ್ವ ಅಭಿಯಾನ” ವನ್ನು ಡಿ .23 ರಂದು ‘ಅಂಬೇಡ್ಕರ್ ಸಭಾಭವನ’ ಬೆಳ್ತಂಗಡಿಯಲ್ಲಿ ಹಮ್ಮಿಕೊಳ್ಳಲಾಯಿತು.

ತಾಲೂಕಿನ 860 ಫಲಾನುಭಾವಿಗಳ ಭಾಗವಹಿಸುವಿಕೆಯ ಮೂಲಕ ಸಲಹೆ ಮತ್ತು ಸೂಚನೆಗಳ ಮೂಲಕ ಸಹಕಾರ ಸಂಘವನ್ನು ಶೀಘ್ರದಲ್ಲಿ ಪ್ರಾರಂಭಿಸಿ ಸಹಕಾರ ಕ್ಷೇತ್ರದಲ್ಲಿ ಸಾಮಾನ್ಯ ಜನರಂತೆ ವಿಕಲಚೇತನರು, ವಿಕಲಚೇತನರಿಂದಲೇ, ವಿಕಲಚೇತನರಿಗೋಸ್ಕರ ನಡೆಸಲ್ಪಡುವ ಸಹಕಾರ ಸಂಘದ ಯೋಜನೆ ಹಾಗೂ ಸೌಲಭ್ಯಗಳನ್ನು ಸಂಘದ ಅಡಿಯಲ್ಲಿ ಇಲಾಖೆ ಹಾಗೂ ಸರಕಾರದ ಮೂಲಕ ಸಮರ್ಪಕವಾಗಿ ಬಳಸಿ ಸಮಾಜದ ಮುಖ್ಯವಾಹಿನಿಯಲ್ಲಿ ಪ್ರತಿನಿಧಿಸುವ ಸಂಕಲ್ಪವನ್ನು ಮಾಡಿ ಕಾರ್ಯಕ್ರಮವನ್ನು ರಾಷ್ಟ್ರಗೀತೆಯ ಮೂಲಕ ನಡೆಸಲಾಯಿತು.

LEAVE A REPLY

Please enter your comment!
Please enter your name here