p>
ಕೊಕ್ಕಡ: ಅನಾರು ಹಾಲಿನ ಡೈರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರು ಮಾಡಿದ 2 ಲಕ್ಷ ರೂಪಾಯಿ ಸಹಾಯಧನವನ್ನು ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರರವರು ಸಮಿತಿ ಅಧ್ಯಕ್ಷ ದೇವಪಾಲ ಅಜ್ರಿ, ಕಾರ್ಯದರ್ಶಿ ಪುರಂದರ, ನಿರ್ದೇಶಕರಾದ ರುಕ್ಮಯ್ಯ, ಚೆನ್ನಪ್ಪ, ಕೇಶವ, ಚೇತನ್, ಹಾಲು ಪರಿವೀಕ್ಷಕಿ ಭವ್ಯರವರಿಗೆ ಹಸ್ತಾಂತರಿಸಿದರು.
ಕೊಕ್ಕಡ ವಲಯ ಮೇಲ್ವಿಚಾರಕ ಭಾಗೀರಥಿ, ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಆನಂದ ಗೌಡ, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ಮೋಹನ್, ನಿಕಟ ಪೂರ್ವ ಒಕ್ಕೂಟದ ಕಾರ್ಯದರ್ಶಿ ಶಾಹಿದ, ಸೇವಾಪ್ರತಿನಿಧಿ ಸುಮಿತ್ರ ಹಾಗೂ ಊರಿನ ಗಣ್ಯರು ಸಂಘದ ಸದಸ್ಯರು ಉಸ್ಥಿತರಿದ್ದರು.