ಸವಣಾಲು: ಕ್ರಿಸ್ ಮಸ್ ಸೌಹಾರ್ದ ಕೂಟ

0

p>

ಬೆಳ್ತಂಗಡಿ: ಹೋಲಿ ರಿಡೀಮರ್ ಚರ್ಚ್ ಬೆಳ್ತಂಗಡಿ, ಹೋಲಿ ರಿಡೀಮ‌ರ್ ವಾಳೆ, ಪವಿತ್ರ ಶಿಲುಬೆಯ ವಾಳೆ ಹಾಗೂ ಸಂತ ಕ್ಷೇವಿಯರ್ ವಾಳೆ ಸಹಯೋಗದೊಂದಿಗೆ ಕ್ರಿಸ್‌ ಮಸ್‌ ಹಬ್ಬದ ಅಂಗವಾಗಿ ಸವಣಾಲು ಮಂಜದ ಬೆಟ್ಟುವಿನಲ್ಲಿ ಸೌಹಾರ್ದ ಕೂಟ ಡಿ. 22 ರಂದು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಾಯಿಲ ದಯಾ ವಿಶೇಷ ಶಾಲಾ ನಿರ್ದೆಶಕ ಫಾ. ವಿನೋದ್ ಮಸ್ಕರೇನಸ್ ಎಲ್ಲರನ್ನೂ ಪ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮವಾಗಿದೆ. ದ್ವೇಷ, ಅಸೂಯೇ, ಬಿಟ್ಟು ಮಾನವೀಯ ಮೌಲ್ಯಗಳಿಗೆ ಬೆಲೆ ನೀಡಿದಾಗ ಮಾನವ ಜನ್ಮ ಪಾವನವಾಗುತ್ತದೆ. ಮಾನವೀಯ ಮೌಲ್ಯವೇ ಶ್ರೇಷ್ಠವಾದದ್ದು ಎಂದರು.

ಸಭಾಧ್ಯಕ್ಷತೆಯನ್ನು ಹೋಲಿ ರಿಡೀಮರ್ ಚರ್ಚ್ ಬೆಳ್ತಂಗಡಿ ಧರ್ಮಗುರು ರೆ. ಫಾ. ವಾಲ್ಟರ್ ಡಿಮೆಲ್ಲೊ ವಹಿಸಿ ಶುಭಾಶೀರ್ವಾದಗೈದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನೋಟರಿ ವಕೀಲ, ಬಲಿಪ ರೆಸಾರ್ಟ್ ಮಾಲಕ ಮುರಳೀಧರ ಬಲಿಪ, ಮಹಮ್ಮದ್ ರಿಯಜ್ ಸಹದಿ ಧರ್ಮಗುರುಗಳು ಬದ್ರಿಯ ಜುಮ್ಮಾ ಮಸೀದಿ ಸವಣಾಲು, ಹೋಲಿ ರಿಡೀಮರ್ ಅಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ ಫಾ. ಕ್ಲೀಫರ್ಡ್ ಸೈಮನ್ ಪಿಂಟೋ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮೇಲಂತಬೆಟ್ಟು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸವಿತಾ, ಸಂತ ತೆರೆಸಾ ಕಾನ್ವೆಂಟ್ ಸುಪೀರಿಯ‌ರ್ ಜೆಸಿಂತಾ ಬರೊಟೊ, ಲಾಯಿಲ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಜಯಂತಿ ಎಂ. ಕೆ. ಮೇಲಂತಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಹೋಲಿ ರಿಡೀಮ‌ರ್ ವಾಳೆ ಗುರಿಕಾರ ವಿನ್ಸೆಂಟ್ ಲೋಬೋ, ಸಂತ ಕ್ಷೇವಿಯರ್ ವಾಳೆ ಗುರಿಕಾರರು ಲಿಲ್ಲಿ ಲೋಬೋ, ಪವಿತ್ರ ಶಿಲುಬೆಯ ವಾಳೆ ಗುರಿಕಾರರು ವಿಲ್ಮಾ ಲೋಬೋ, ವಾಳೆಯ ಗ್ರಾಮಸ್ಥರು, ವಿವಿಧ ಸಮಾಜದ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿನ್ಸೆಂಟ್ ಲೋಬೊ ಸ್ವಾಗತಿಸಿ, ವಾಲ್ಟರ್ ಮೋನಿಸ್ ನಿರ್ವಹಿಸಿದರು. ಸರಳಾ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here