p>
ಉಜಿರೆ: ಕಾಲೇಜಿನ ಅತ್ಯುತ್ತಮ ಅಭ್ಯಾಸಗಳಲ್ಲೊಂದಾದ ಪೌಷ್ಟಿಕಾಂಶದ ಕುರಿತಾದ ಜಾಗೃತಿ ಕಾರ್ಯಕ್ರಮವನ್ನು ಸಸ್ಯಶಾಸ್ತ್ರ ವಿಭಾಗದಿಂದ, ಬೆಳ್ತಂಗಡಿಯ ಚರ್ಚ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಸುಮಾರು 150 ವಿದ್ಯಾರ್ಥಿಗಳು ಪೌಷ್ಟಿಕ ಆಹಾರದ ಅಗತ್ಯತೆ, ಆಹಾರದಲ್ಲಿ ತರಕಾರಿ ಹಾಗೂ ಸಿರಿಧಾನ್ಯಗಳ ಮಹತ್ವವನ್ನು ಅರಿತುಕೊಂಡರು.
ಕಾರ್ಯಕ್ರಮದಲ್ಲಿ ತೃತೀಯ ಬಿ. ಎಸ್. ಸಿ ವಿದ್ಯಾರ್ಥಿನಿಯರಾದ ಪೂರ್ವಿಕ, ಪ್ರಿಯಾಂಕ ಹಾಗೂ ನಯನಾ ವಿದ್ಯಾರ್ಥಿ ಸಮೂಹದೊಂದಿಗೆ ಸಂವಹನ ನಡೆಸಿ ಮಾಹಿತಿ ರವಾನಿಸಿದರು.
ಶಾಲೆಯ ಶಿಕ್ಷಕಿಯರಾದ ರೆನ್ನಿ ವಾಸ್ ಹಾಗೂ ಹೆಲೆನ್ ತಾವ್ರೋ ತಮ್ಮ ಪೂರ್ಣ ಸಹಕಾರವನ್ನು ನೀಡಿದರು.
ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಭಿಲಾಷ್ ಕೆ. ಎಸ್. ಸಂಪೂರ್ಣ ಕಾರ್ಯಕ್ರಮವನ್ನು ಸಂಯೋಜಿಸಿದರು.
p>