p>
ಬೆಳ್ತಂಗಡಿ: ಡಿ. 22 ರಂದು ರಾತ್ರಿ ಕಡಿರುದ್ಯಾವರ ಗ್ರಾಮದ ಕುಚ್ಚೂರು ಬೈಲು ಮತ್ತು ಮಲ್ಲಡ್ಕ ಪರಿಸರದಲ್ಲಿ ಒಂಟಿ ಸಲಗ ಕೃಷಿ ತೋಟಗಳಿಗೆ ದಾಳಿ ನಡೆಸಿ ತೆಂಗು, ಬಾಳೆ, ಪಪ್ಪಾಯ, ಅನಾನಾಸ್, ದನಗಳಿಗೆ ಬೆಳೆಸಿದ ನೇಪಿಯರ್ ಹುಲ್ಲು ಇತ್ಯಾದಿ ಕೃಷಿ ನಾಶ ಮಾಡಿದೆ.
ನೇಮಣ್ಣ ಗೌಡ ಕುಚ್ಚೂರು, ರಾಜೇಂದ್ರ ಗೌಡ ಕುಚ್ಚೂರು, ಗೋಪಾಲ ಗೌಡ ಕುಚ್ಚೂರು, ಮಂಜುನಾಥ ಗೌಡ ಕುಚ್ಚೂರು, ಗಂಗಮ್ಮ ಮಲೆಕುಡಿಯ ಮಲ್ಲಡ್ಕ, ಶೀನಪ್ಪ ಗೌಡ ಮಲ್ಲಡ್ಕ, ರಮೇಶ್ ಮಲೆಕುಡಿಯ ಮಲ್ಲಡ್ಕ ಇವರುಗಳ ಕೃಷಿ ತೋಟಗಳಲ್ಲಿ ಸಂಚರಿಸಿ ಬೆಳೆ ಹಾನಿ ಮಾಡಿದೆ.
p>