ಬೆಳ್ತಂಗಡಿ: ಡಿ. ಕೆ. ಆರ್. ಡಿ. ಎಸ್ (ರಿ) ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಡಿ. 21 ರಂದು ಕ್ರಿಸ್ ಮಸ್ ಆಚರಣೆಯನ್ನು ಬೆಳ್ತಂಗಡಿ, ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು.
ಸೈಂಟ್ ಥೋಮಸ್ ಚರ್ಚ್ ಗಂಡಿಬಾಗಿಲು ಧರ್ಮಗುರುಗಳಾದ ವಂದನೀಯ. ಫಾ. ಜೋಸ್ ಆಯಾಂಕುಡಿ ಈ ಕಾರ್ಯಕ್ರಮದ ಪ್ರಾರಂಭದ ಸವಿನೆಪುಗಳನ್ನು ನೆನಪಿಸಿ ಕೇಕ್ ಕತ್ತರಿಸುವ ಮೂಲಕ ಕ್ರಿಸ್ ಮಸ್ ಸಂದೇಶ ನೀಡಿದರು.
ಸೈಂಟ್ ತೋಮಸ್ ಪ್ರೌಡಶಾಲೆ ಗಂಡಿಬಾಗಿಲು ಇಲ್ಲಿಯ ಪ್ರಾಧ್ಯಾಪಕ ಥೋಮಸ್ ಪಿ. ಎ. ಹಾಗೂ ಸ್ನೇಹಕಿರಣ್, ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಏಲೀಯಮ ತೋಮಸ್ ಆಹಾರ ಕಿಟ್ ವಿತರಿಸಿ ಕಾರ್ಯಕ್ರಮಕ್ಕೆ ಶುಭಾರೈಸಿದರು.
ಸಿಸ್ಟರ್ ಸೆಲಿನ್ ಮದರ್ ಸುಪಿರಿಯರ್ ಎಸ್. ಎ. ಬಿ. ಎಸ್ ಕಾನ್ವೆಂಟ್ ಗಂಡಿಬಾಗಿಲು ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮದ ಲಕ್ಕಿ ಪರ್ಸನ್ ಆಫ್ ದಿ ಇಯರನ್ನು ಆಯ್ಕೆ ಮಾಡಿ, ಮಾತೃವೇದಿ ಸಂಘಟನೆಯ
ಅಧ್ಯಕ್ಷೆ ಪ್ರಭಾ ಯಶೋದರವರಿಗೆ ಬಹುಮಾನ ವಿತರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯರು ವಿವಿಧ ಗೀತೆಗಳನ್ನು ಹಾಡಿ ಎಲ್ಲರ ಮನರಂಜಿಸಿದರು. ಹಾಗೂ ಮಾತೃ ವೇದಿ ಸಂಘಟನೆಯ ಸದಸ್ಯರು ಕ್ರಿಸ್ ಮಸ್ ಕ್ಯಾರೋಲ್ ಹಾಡನ್ನು ಹಾಡಿದರು.
ಡಿ. ಕೆ. ಆರ್. ಡಿ. ಎಸ್ ಸಂಸ್ಥೆಯ ನೇತೃತ್ವದಲ್ಲಿ ನವಜೀವನ ಕುಟುಂಬದ ಸದಸ್ಯರಿಗೆ ನೀಡಿರುವ ಸೇವೆಗೆ ಕೃತಜ್ಞತಾ ಭಾವವಾಗಿ ನವಜೀವನ ಕುಟುಂಬದ ಸದಸ್ಯರು ಕಿರುಕಾಣಿಕೆಯನ್ನು
ಡಿ. ಕೆ. ಆರ್. ಡಿ. ಎಸ್ ಸಂಸ್ಥೆಗೆ ಹಾಗೂ ವ. ಫಾದರ್ ಜೋಸ್ ಆಯಾಂಕುಡಿ ಇವರಿಗೆ ನೀಡಿದರು.
ಲಲಿತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿ. ಕೆ. ಆರ್. ಡಿ. ಎಸ್ ಸಂಸ್ಥೆಯ ನಿರ್ದೇಶಕ ವಂದನೀಯ.
ಫಾ. ಬಿನೋಯಿ ಎ. ಜೆ. ಪ್ರಾಸ್ತವಿಕ ನುಡಿಯನ್ನು ಆಡಿದರು.
ಈ ದಿನದ ಭೋಜನ ಕೂಟಕ್ಕೆ ಆರ್ಥಿಕ ಸಹಾಯವನ್ನು ಥೋಮಸ್ ಪಿ. ಎ ಕುಟುಂಬದವರು ಹಾಗೂ ಪ್ರತಿ ಸದಸ್ಯರಿಗೆ ಕೇಕನ್ನು ನೀಡಿಲು ಆರ್ಥಿಕ ಸಹಾಯ ನೀಡಿದರು. ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯೆ ಪುಷ್ಪ ಪ್ರಾರ್ಥನೆ ಹಾಡಿ, ಡಿ. ಕೆ. ಆರ್. ಡಿ. ಎಸ್ ಸಂಸ್ಥೆಯ ವಿದ್ಯಾನಿಧಿ ಸಂಯೋಜಕಿ ಜಿನಿ ಎಲ್ಲರನ್ನು ಸ್ವಾಗತಿಸಿ, ಸಂಸ್ಥೆಯ ಸಂಯೋಜಕಿ ಶ್ರೇಯಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕರ್ತ ಮಾರ್ಕ್ ಡಿಸೋಜರವರು ಕಾರ್ಯಕ್ರಮವನ್ನು ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.