ದಯಾ ವಿಶೇಷ ಶಾಲೆಯಲ್ಲಿ ಪತ್ರಕರ್ತ ಬಾಂಧವರೊಂದಿಗೆ ಕ್ರಿಸ್ ಮಸ್‌ ಹಬ್ಬ ಆಚರಣೆ

0

p>

ಬೆಳ್ತಂಗಡಿ: ಡಿ. 21 ರಂದು ಕಪುಚಿನ್‌ ಕೃಷಿಕ ಸೇವಾ ಕೇಂದ್ರದ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ಪತ್ರಕರ್ತರೊಂದಿಗೆ ಕ್ರಿಸ್ ಮಸ್‌ ಹಬ್ಬವನ್ನು ಆಚರಿಸಲಾಯಿತು. ವಂ. ಫಾ. ವಿನೋದ್‌ ಮಸ್ಕರೇನಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಶಿಬಿ ಧರ್ಮಸ್ಥಳ ಮುಖ್ಯ ಅತಿಥಿಗಳಾಗಿ ಆಗಮಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ದಿವ್ಯಾ ವಿ.ಟಿ ಹಾಗೂ ಶಾಲಾ ಮಕ್ಕಳ ಪ್ರತಿನಿಧಿಯಾಗಿ ಮಾಸ್ಟರ್‌ ಗಗನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿ ಧರ್ಮಸ್ಥಳ ಮಾತನಾಡಿ ಇಂದು ಈ ಕಾರ್ಯಕ್ರಮಕ್ಕೆ ಪತ್ರಕರ್ತರ ಸಂಘದ ಎಲ್ಲಾ ಸದಸ್ಯರನ್ನು ಸ್ವಾಗತಿಸಿದ ಸಂಸ್ಥೆಯ ಮುಖ್ಯಸ್ಥರಿಗೂ ಹಾಗೂ ಎಲ್ಲರನ್ನೂ ವಂದಿಸಿದರು. ಈ ಮಕ್ಕಳ ಸಂತಸ ಸಡಗರ ಕಂಡಾಗ ತುಂಬಾ ಸಂತೋಷವಾಗುತ್ತಿದೆ. ಪ್ರತಿಯೊಬ್ಬರು ಇಲ್ಲಿಗೆ ಆಗಮಿಸಿ ಇಲ್ಲಿನ ಕಾರ್ಯವೈಖರಿಯನ್ನು ನೋಡುವುದು ಬಹಳ ಮುಖ್ಯ.

ಕಪುಚಿನ್‌ ಕೃಷಿಕ ಸೇವಾ ಕೇಂದ್ರ ಅತ್ಯುತ್ತಮ ರೀತಿಯಲ್ಲಿ ವಿಶೇಷವಾಗಿ ಪ್ರತಿ ವರ್ಷವೂ ಪತ್ರಕರ್ತರೊಂದಿಗೆ ಕ್ರಿಸ್ ಮಸ್‌ ಹಬ್ಬವನ್ನು ಆಚರಿಸುತ್ತಿರುವುದು ಶ್ಲಾಘನೀಯ. ನಾವೆಲ್ಲರೂ ಸಾಧ್ಯವಾದಷ್ಟು
ರೀತಿಯಲ್ಲಿ ಇಲ್ಲಿನ ಕಾರ್ಯಗಳಿಗೆ ನಮ್ಮ ಸಹಾಯ ಸಹಕಾರವನ್ನು ಒದಗಿಸುವ ಭರವಸೆಯನ್ನು ನೀಡುತ್ತೇವೆ ಎನ್ನುತ್ತಾ ಸರ್ವರಿಗೂ ಕ್ರಿಸ್ ಮಸ್‌ ಹಬ್ಬದ ಶುಭಾಶಯವನ್ನು ಕೋರಿದರು.

ಶಾಲಾ ನಿರ್ದೇಶಕ ವಂ. ಫಾ. ವಿನೋದ್‌ ಮಸ್ಕರೇನಸ್‌ ಯೇಸು ಮನುಷ್ಯನಾಗಿ ಜನಿಸಿದ ಉದ್ದೇಶದ ಬಗ್ಗೆ ತಿಳಿಸುತ್ತಾ, ಮನುಷ್ಯನಾಗಿ ಜನಿಸಿದ ಮೇಲೆ ಪ್ರತಿಯೊಬ್ಬರು ಪುಣ್ಯದ ಕೆಲಸ ಮಾಡಬೇಕು. ಸಮಾಜದಲ್ಲಿ ಮನುಷ್ಯನಾಗಿ ಜೀವನ ಮಾಡಿದ ಮೇಲೆ ಉತ್ತಮ ರೀತಿಯಲ್ಲಿ ಭಾತೃತ್ವ ಮನೋಭಾವದೊಂದಿಗೆ ಪರಸ್ಪರ ಗೌರವದಿಂದ ಬಾಳಬೇಕು. ಯೇಸು ತನ್ನ ಜೀವನದಲ್ಲಿ ಸಮಾಜದಲ್ಲಿ ಕಡೆಗಣಿಸಲ್ಪಟ್ಟವರ ಏಳಿಗೆಗಾಗಿ ಅನುಭವಿಸಿದ ಕಷ್ಟ-ಸಂಕಷ್ಟಗಳ ಬಗ್ಗೆ ತಿಳಿಸಿ ನಡೆಯಲಾಗದವರನ್ನು ನಡೆಸಿ, ಬಡವರನ್ನು ಪ್ರೀತಿಸಿ, ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತವನ್ನು ಚಾಚಿ, ಸಮಾಜದಲ್ಲಿ ಶಾಂತಿ, ಸಮಾಧಾನ, ನೆಮ್ಮದಿಯಿಂದ ಬದುಕಲು ಪ್ರಭು ಯೇಸು ನಮ್ಮೆಲ್ಲರನ್ನು ಹರಸಲಿ ಎಂದು ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸದಸ್ಯರು ಉಪಸ್ಥಿತರಿದ್ದರು. ಎಲ್ಲಾ ಪತ್ರಕರ್ತ ಬಾಂಧವರಿಗೂ ಸಂಸ್ಥೆಯ ವತಿಯಿಂದ ಕ್ರಿಸ್ ಮಸ್‌ ಹಬ್ಬದ ಪರವಾಗಿ ಕಿರುಕಾಣಿಕೆಯನ್ನು ಹಾಗೂ ಕೇಕನ್ನು ನೀಡಿ ಕ್ರಿಸ್ ಮಸ್‌ ಹಬ್ಬದ ಸಂತೋಷವನ್ನು ಹಂಚಿಕೊಳ್ಳಲಾಯಿತು. ಶಾಲಾ ಮಕ್ಕಳು ಕ್ರಿಸ್ ಮಸ್‌ ಹಬ್ಬದ ಸಂದೇಶವನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಶಾಲಾ ಶಿಕ್ಷಕಿ ಸಂಜನಾ ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರೆ, ಸುರಕ್ಷಾ ನೆರೆದ ಸರ್ವರನ್ನೂ ವಂದಿಸಿದರು.

p>

LEAVE A REPLY

Please enter your comment!
Please enter your name here