ಡಿ. ಕೆ. ಆರ್. ಡಿ. ಎಸ್ ವತಿಯಿಂದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ ಮಸ್ ಸ್ನೇಹಕೂಟ

0

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ವಿಭಾಗವಾದ ಡಿ. ಕೆ. ಆರ್. ಡಿ. ಎಸ್ ನೇತೃತ್ವದಲ್ಲಿ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ ಮಸ್ ಸ್ನೇಹ ಕೂಟವು ದಿನಾಂಕ ಡಿ. 20 ರಂದು ಸಾಂತೋಮ್ ಟವರ್ ನಲ್ಲಿ ನಡೆಯಿತು.

ಡಿ. ಕೆ. ಆರ್. ಡಿ. ಎಸ್ ಸಂಸ್ಥೆಯ ನಿರ್ದೇಶಕ ವಂದನೀಯ ಫಾ. ಬಿನೋಯಿ ಎ. ಜೆ. ಪ್ರಾಸ್ತಾವಿಕ ಮಾತನಾಡಿ ಮಾಧ್ಯಮ ಮಿತ್ರರು ಸಂಸ್ಥೆಯ ಕಾರ್ಯಕ್ರಮಕ್ಕೆ ನೀಡುವ ಸಹಕಾರಕ್ಕೆ ಸ್ಮರಿಸಿದರು.

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಇನ್ನೊರ್ವ ಮುಖ್ಯ ಅತಿಥಿ ಮೀಡಿಯಾ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಮೀಡಿಯಾ ಅಪೋಸ್ತಲೇಟ್ ನಿರ್ದೇಶಕ ವಂದನೀಯ ಫಾ. ಮ್ಯಾಥ್ಯೂ ತಾಯೇಕ್ಕಾಟ್ಟೀಲ್ ಕ್ರಿಸ್ ಮಸ್ ಕೇಕ್ ಕತ್ತರಿಸಿ, ಕ್ರಿಸ್ ಮಸ್ ಹಬ್ಬದ ಸಂದೇಶ ನೀಡಿದರು.
ಹಾಜರಿದ್ದ ಪತ್ರಿಕೆ ಹಾಗೂ ಮೀಡಿಯಾ ಕ್ಲಬ್ಬಿನ ಸದಸ್ಯರಿಗೆ ಕಿರು ಕಾಣಿಕೆ ನೀಡಲಾಯಿತು. ಸಂಯೋಜಕಿ ಶ್ರೇಯಾ ಪ್ರಾರ್ಥನೆ ಹಾಡಿದರು. ಸಂಸ್ಥೆಯ ಕಾರ್ಯಕರ್ತ ಮಾರ್ಕ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಂಯೋಜಕ ಸುನಿಲ್ ಗೊನ್ಸಾಲ್ವಿಸ್ ಎಲ್ಲರನ್ನು ಸ್ವಾಗತಿಸಿ, ಜಿನಿ ಪಿ. ಜೆ. ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here