ಧರ್ಮಸ್ಥಳದಲ್ಲಿ ಹದಗೆಟ್ಟ ರಸ್ತೆ ಗುಂಡಿಯಲ್ಲೇ ಗಿಡ ನೆಟ್ಟ ಗ್ರಾಮಸ್ಥರು – ನೇತ್ರಾವತಿ-ಅಜಿಕ್ಕುರಿ ರಸ್ತೆಯ ತಾತ್ಸಾರಕ್ಕೆ ಜನಾಕ್ರೋಶ

0

p>

ಧರ್ಮಸ್ಥಳ: ನೇತ್ರಾವತಿಯಿಂದ ಅಜಿಕ್ಕುರಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ದುರಸ್ತಿ ಕಾರ್ಯ ಮಾಡದಿರುವುದನ್ನು ವಿರೋಧಿಸಿ ಡಿ.19ರ ರಾತ್ರಿ ರಸ್ತೆ ಗುಂಡಿಯಲ್ಲೇ ಗಿಡನೆಟ್ಟ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ನೇತ್ರಾವತಿ ನದಿಯ ಪವಿತ್ರ ತೀರ್ಥಗುಂಡಿಗೆ ಹೋಗುವ ರಸ್ತೆಯೂ ಇದೆ ಆಗಿದ್ದು, ತೀರ್ಥಕ್ಕೆ ಬರುವ ಅರ್ಚಕರು ಪ್ರತಿನಿತ್ಯ ಹರಸಾಹಸ ಪಡಬೇಕಿದೆ. ರಸ್ತೆ ರಿಪೇರಿ ಮಾಡಿಸಿ ಅಂತ ಗ್ರಾಮ ಪಂಚಾಯತ್, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ರಸ್ತೆ ಗುಂಡಿಯಲ್ಲಿ ಹೂವಿನ ಗಿಡ, ಬಾಳೆ ಹೀಗೆ ಹಲವು ಗಿಡಗಳನ್ನು ನೆಟ್ಟು ಜನರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

p>

LEAVE A REPLY

Please enter your comment!
Please enter your name here