ಶ್ರೀ. ಧ. ಮಂ. ಆಂಗ್ಲ ಮಾಧ್ಯಮ ಶಾಲೆ – ಸಂಭ್ರಮದ ಪ್ರತಿಭಾ ದಿನಾಚರಣೆ

0

p>

ಧರ್ಮಸ್ಥಳ: ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಅದ್ದೂರಿಯಾಗಿ ಪ್ರತಿಭಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ವಿವಿಧ ಬಣ್ಣದ ದಿರಿಸಿನೊಂದಿಗೆ ಸಂಭ್ರಮದಿಂದ ಓಡಾಡಿಕೊಂಡಿದ್ದರು.

ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಯ ಒಂದು ಭಾಗವಾಗಿ ಹಾಗೂ ಪ್ರತಿಭೆಗಳನ್ನು ಹೊರಹೊಮ್ಮಲು ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುವ ಸಲುವಾಗಿ ಈ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ಧ್ವಜಾರೋಹಣ ಮಾಡುವುದರ ಮುಖಾಂತರ ಪ್ರತಿಭಾ ದಿನಾಚರಣೆಯ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆದರು.

ಈ ಕಾರ್ಯಕ್ರಮವನ್ನು ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಡಿ. ವೀರೇಂದ್ರ ಹೆಗ್ಗಡೆಯವರ ಅಮೃತ ಹಸ್ತದಿಂದ ದೀಪ ಪ್ರಜ್ವಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಮಾತನಾಡಿದ ಅವರು ಶಾಲೆಯ ಸಾಧನೆ ಹಾಗೂ ವಿದ್ಯಾರ್ಥಿಗಳ ಕುರಿತಾಗಿ ಮಾತನಾಡಿ ಶುಭ ಹಾರೈಸಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾಗಿರುವ ಹರ್ಷೇಂದ್ರ ಕುಮಾರ್ ಆಗಮಿಸಿ ಶಾಲಾ ಹಸ್ತಪ್ರತಿ ಪತ್ರಿಕೆಯಾದ ಟ್ಯಾಲೆಂಟ್ ಹಾಗೂ ಕನಸು ಇವುಗಳನ್ನು ಅನಾವರಣಗೊಳಿಸಿದರು.

ಎಸ್. ಎಸ್. ಎಲ್. ಸಿ ಡಿಸ್ಟಿಂಕ್ಷನ್ ಪಡೆದವರಿಗೆ ಮಾತೃಶ್ರೀ ಹೇಮಾವತಿ ಹೆಗ್ಗಡೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ವಿಶೇಷ ಸಾಧನೆ ಮಾಡಿದವರನ್ನು, ತರಗತಿಯಲ್ಲಿ ವಿಶೇಷ ಸಾಧನೆ ಮಾಡಿದವರಿಗೆ, ರಾಜ್ಯಮಟ್ಟ – ಜಿಲ್ಲಾ ಮಟ್ಟ ಇತ್ಯಾದಿಗಳಲ್ಲಿ ಸಾಧನೆ ಮಾಡಿದ ಅನೇಕ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು.

ಚಿತ್ರ ಭಿಡೆ, ಹರಿಪ್ರಸಾದ್ ಅರ್ಮುಡಿತ್ತಾಯ, ಕೇಶವತಿ, ಜೀವಂಧರ್ ಕುಮಾರ್, ರಜತಾ ಪಿ. ಶೆಟ್ಟಿ, ರೇಷ್ಮಾ, ರವಿಪ್ರಕಾಶ್ ರೈ, ಧನಲಕ್ಷ್ಮಿ ಡಿ., ಮುಂತಾದ ಗಣ್ಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬುವ ಕೆಲಸವನ್ನು ಮಾಡಲಾಯಿತು. ಶಾಲೆಯ ವಿದ್ಯಾರ್ಥಿಗಳು ಭರತನಾಟ್ಯ, ಕಥಕ್ ಫ್ಯೂಷನ್ ನೃತ್ಯ, ಯೋಗ ನೃತ್ಯ, ಯಕ್ಷಗಾನ, ಮಹಿಷಾಸುರ ಮರ್ಧಿನಿ ಹೀಗೆ ವಿವಿಧ ಪ್ರಕಾರದ ನೃತ್ಯಗಳನ್ನು ಪ್ರದರ್ಶಿಸಿದರು.

ಈ ಬಾರಿ ಬದುಕು ಭಾವನೆಗಳ ಲಹರಿ ಎಂಬ ವಿಷಯದ ಕುರಿತು ನೃತ್ಯ ಪ್ರದರ್ಶನವನ್ನು ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎಸ್. ಡಿ. ಎಮ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿರುವ ಧನ್ಯ ಕುಮಾರ್, ಗ್ರಾಮಪಂಚಾಯತ್ ಧರ್ಮಸ್ಥಳದ ಅಧ್ಯಕ್ಷೆ ವಿಮಲ, ಸಿ. ಆರ್. ಪಿ ಆಗಿರುವ ಪ್ರತಿಮಾ, ದೇವಳದ ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಅಧೀನದಲ್ಲಿರುವ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಹಾಗೂ ಶಿಕ್ಷಕ ವೃಂದದವರು, ಹೀಗೆ ಅನೇಕ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ನೃತ್ಯ ಸಂಯೋಜನೆಯನ್ನು ಶಾಲಾ ಶಿಕ್ಷಕ ವೃಂದ ಸಂಪೂರ್ಣ ಮುತುವರ್ಜಿಯಿಂದ ತಾವೇ ಮಾಡಿದರು. ವಿದ್ಯಾರ್ಥಿಗಳ ನೃತ್ಯಕ್ಕೆ ಮತ್ತಷ್ಟು ಮೆರುಗು ತಂದಿದ್ದು ಹೊಳ್ಳ ಆರ್ಟ್ಸ್ ಹಾಗೂ ಮಾತಾ ಆರ್ಟ್ಸ್ ನವರು ಮಾಡಿದ ಮುಖ ವರ್ಣಿಕೆ. ತಮ್ಮ ಮಕ್ಕಳ ಸಾಧನೆ ಹಾಗೂ ಪ್ರತಿಭಾ ಪ್ರದರ್ಶನವನ್ನು ಕಂಡು ಹೆತ್ತವರು ಸಂಭ್ರಮಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

p>

LEAVE A REPLY

Please enter your comment!
Please enter your name here