p>
ಮಂಜೊಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ನಡ ಇದರ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮ ಡಿ. 14 ರಂದು ನಡೆಯಿತು. ಈ ಕ್ರೀಡಾಕೂಟದ ಉದ್ಘಾಟನೆಯನ್ನು ಕೆ. ಪಿ. ಸಿ. ಸಿ ಪ್ರಧಾನ ಕಾರ್ಯದರ್ಶಿ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಅಧ್ಯಕ್ಷ ರಕ್ಷಿತ್ ಶಿವರಾಂ ನೇರವೇರಿಸಿದರು.
ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಇವರು ನಮ್ಮ ಗುರಿ ಆಕಾಶದೆತ್ತರಕ್ಕೆ ಇರಬೇಕು. ಆಸಾಧ್ಯವೆನ್ನುವುದು ಯಾವುದು ಇಲ್ಲಾ ಕಷ್ಟಪಟ್ಟರೆ ಸಾಧ್ಯ. ಛಲವೊಂದಿದ್ದರೆ ಎಂತಾಹ ಗುರಿಯನ್ನು ಮುಟ್ಟುಬಹುದು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಜನಾಬ್ ಸೈಯ್ಯದ್ ಹಬೀಬ್ ಸಾಹೇಬ್, ಪ್ರದಾನ ಕಾರ್ಯದರ್ಶಿ ಜನಾಬ್ ಸೈಯ್ಯದ್ ಆಯ್ಯೂಬ್, ಕೋಶಾಧಿಕಾರಿ ಸೈಯ್ಯದ್ ಇರ್ಫಾನ್, ಶಾಲಾ ಮುಖ್ಯೋಪಾಧ್ಯಾಯ ಜಾಕೀನ್ ಬಿನ್, ದೈಹಿಕ ಶಿಕ್ಷಕ ಸುಂದರ್ ನಾಯ್ಕ ಹಾಗೂ ಶಾಲಾ ಸಹ ಶಿಕ್ಷಕರು ಉಪಸ್ಥಿತರಿದ್ದರು.
p>