ಉಜಿರೆ: ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಬಹುಮಾನ ವಿತರಣಾ ದಿನ”

0

ಉಜಿರೆ: ಡಿ. 16 ರಂದು “ಒಂದೊಂದು ನಿಮಿಷವೂ ಬಂಗಾರದ ನಾಣ್ಯಕ್ಕೆ ಸಮ. ಪ್ರತಿಯೊಂದು ಸ್ಪರ್ಧೆಯ ಉದ್ದೇಶ ನಿಮ್ಮಲ್ಲಿರುವ ಸಾಮರ್ಥ್ಯವನ್ನು ಹೊರತೆಗೆಯುವುದೇ ಆಗಿದೆ. ನಮ್ಮನ್ನು ಇನ್ನೊಬ್ಬರಿಗೆ ಹೋಲಿಸುವುದರ ಬದಲು ನಮ್ಮಲ್ಲಿರುವ ಪ್ರತಿಭೆಯನ್ನು ನಾವು ಗುರುತಿಸುವ” ಎಂದು ಸೋನಿಯಾ ವರ್ಮ ಹೇಳಿದರು. ಇವರು ಉಜಿರೆ ಎಸ್. ಡಿ. ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಆಜೋಜಿಸಿದ್ದ “ಬಹುಮಾನ ವಿತರಣಾ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಡೆಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಕಿಂಡರ್ಗಾರ್ಟನ್ ವಿದ್ಯಾರ್ಥಿಗಳಿಗೆ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ದಿಲೀಪ್ ಕುಮಾರ್, ಅತಿಷಯ ಜೈನ್, ವಿಜೇಶ್ ಜೈನ್ ಹಾಗೂ ಶರ್ಮಿತ್ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಉಜಿರೆ ಎಸ್. ಡಿ. ಎಮ್ ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯ ಮುಖ್ಯ ಶಿಕ್ಷಕಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ, ಗುಂಪು ಗಾಯನ, ಕೊಳಲು, ಹಾರ್ಮೋನಿಯಂ, ತಬಲ ಹಾಗೂ ವೀಣಾ ವಾದನ ಆಯೋಜಿಸಲಾಗಿತ್ತು.

ಶಾಲಾ ಪ್ರಾಂಶುಪಾಲ ಮನ್ಮೋಹನ್ ನಾಯ್ಕ್ ಕೆ. ಜಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಕಿ ಶಾಂಟಿ ಜಾರ್ಜ್ ಹಾಗೂ ಸವಿತಾ ವೇದ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here