ಕನ್ಯಾಡಿ. 2: ಡಿ. 13 ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ಯಾಡಿ 2 ಮತ್ತು ಹಳೇ ವಿದ್ಯಾರ್ಥಿ ಸಂಘ ಕನ್ಯಾಡಿ 2 ಇವರ ಸಂಯುಕ್ತ ಆಶಯದಲ್ಲಿ 2024 -25 ನೇ ಸಾಲಿನ ಪ್ರತಿಭಾ ಕಲೋತ್ಸವ ಶಾಲಾ ಧ್ವಜಾರೋಹಣದಿಂದ ಪ್ರಾರಂಭವಾಯಿತು.
ಧ್ವಜಾರೋಹಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಡ್ಲೆಯ ದೈಹಿಕ ಶಿಕ್ಷಣ ಶಿಕ್ಷಕ ಮರಿಯಪ್ಪ ಗೌಡ ನೆರವೇರಿಸಿದರು.
ಕಾರ್ಯಕ್ರಮದ ಉದ್ಘಾಟಕ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ ಪರಮೇಶ್ವರ್ ನೂತನವಾಗಿ ನಿರ್ಮಿಸಿದ ಹೆಣ್ಣು ಮಕ್ಕಳ ಶೌಚಾಲಯವನ್ನು ಉದ್ಘಾಟಿಸಿದರು. ಸತ್ಯಪ್ರಿಯ ಕಲ್ಲುರಾಯ ಪ್ರಧಾನ ಅರ್ಚಕರು ಸೌತಡ್ಕ ದೇವಸ್ಥಾನ ಇವರು 2024 -25 ನೇ ಸಾಲಿನ ದಾನಿಗಳ ಶಾಶ್ವತ ಫಲಕವನ್ನು ಅನಾವರಣಗೊಳಿಸಿದರು.
ಸಭಾ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ ಅಧ್ಯಕ್ಷ ನಂದ ಕೆ, ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ ಪರಮೇಶ್ವರ್ ನೇತೃತ್ವದಲ್ಲಿ ನಡೆಯಿತು.
ಶಾಲೆ ಕುರಿತಾದ ಸಂಪೂರ್ಣವಾದ ವರದಿಯನ್ನು ಪ್ರಭಾರ ಮುಖ್ಯ ಶಿಕ್ಷಕಿ ಪುಷ್ಪಾ ಎನ್. ವಾಚಿಸಿದರು. ಶಾಲೆಗೆ ವಿವಿಧ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಿದ ಮತ್ತು ಸಹಕರಿಸಿದ ಉಮೇಶ್ ಕೆ. ಮಾಜಿ ಅಧಿಕಾರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಇಲಾಖೆ, ರಾಜನ್ ಪೆಟ್ರೋನೆಟ್ ಲಿಮಿಟೆಡ್ ನೆರಿಯಾ, ಮರಿಯಪ್ಪ ಗೌಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಡ್ಲೆ, ಸತ್ಯಪ್ರಿಯ ಕಲ್ಲೂರಾಯ ಸೌತಡ್ಕ ದೇವಸ್ಥಾನಕ್ಕೆ ಮುಖ್ಯ ಅರ್ಚಕರು, ಪ್ರಕಾಶ್ ರಾವ್, ಬಿಟ್ಸ್ ಅಂಡ್ ಬೈಟ್ಸ್ ಬೆಂಗಳೂರು, ಗಣೇಶ್ ಬಜಿಲ ಹಿಂದೂ ಧಾರ್ಮಿಕ ಸೇವಾ ಸಮಿತಿಯ ವ್ಯಕ್ತಿಗಳಿಗೆ ಗೌರವವನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ ಸದಸ್ಯರಾದ ಹರೀಶ್ ಸುವರ್ಣ, ಭಾರತಿ, ರೇವತಿ, ಗೌರವ ಸಲಹೆಗಾರ ರಾಜೇಂದ್ರ ಅಜ್ರಿ, ಎಸ್. ಡಿ. ಎಂ. ಸಿ ಉಪಾಧ್ಯಕ್ಷೆ ರಮ್ಯ ಪ್ರಭಾರ, ಮುಖ್ಯ ಶಿಕ್ಷಕಿ ಪುಷ್ಪ ಎನ್., ಶಾಲಾ ನಾಯಕ ಸುಜಿತ್ ಉಪಸ್ಥಿತರಿದ್ದರು.
ಪ್ರಸ್ತುತ ಸಾಲಿನ ಕಲಿಕೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಎಸ್. ಎಸ್. ಎಲ್. ಸಿ ಡಿಸ್ಟಿಂಕ್ಷನ್ ಅಂಕ ಪಡೆದ ಕನ್ಯಾಡಿ 2 ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವೇದಿಕೆಯಲ್ಲಿದ್ದ ಗಣ್ಯರು ನೀಡಿದರು. ಪೋಷಕರಿಗೆ ನಡೆಸಿದ ವಿವಿಧ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು .
ಸಾಂಸ್ಕೃತಿಕ ಸಿಂಚನವು ಸಾಯಂಕಾಲ ವಿದ್ಯಾರ್ಥಿಗಳ ವಿವಿಧ ರೀತಿಯ ನೃತ್ಯ, ರೂಪಕಗಳಿಂದ ಬಹಳ ವಿಜೃಂಭಣೆಯಿಂದ ನೆರವೇರಿತು. ಎಸ್. ಡಿ. ಎಂ. ಸಿ ಸದಸ್ಯರು, ಪೋಷಕರು, ಶಾಲೆಯ ವಿದ್ಯಾಭಿಮಾನಿಗಳು ಕಾರ್ಯಕ್ರಮದ ಪ್ರೇಕ್ಷಕರಾಗಿದ್ದರು.
ಈ ಕಾರ್ಯಕ್ರಮದ ಸ್ವಾಗತವನ್ನು ಗೌರವ ಸಲಹೆಗಾರ ರಾಜೇಂದ್ರ ಅಜ್ರಿ, ಧನ್ಯವಾದವನ್ನು ಅತಿಥಿ ಶಿಕ್ಷಕಿ ಶ್ವೇತಾ, ನಿರೂಪಣೆಯನ್ನು ಸಹ ಶಿಕ್ಷಕರಾದ ಅರ್ಚನಾ ಮತ್ತು ದೀಪಿಕಾ ಅವರು ನಡೆಸಿಕೊಟ್ಟರು.