
ಬೆಳಾಲು: ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಉದ್ಘಾಟಸಿ, ಗ್ರಾಮದ ಜನತೆ ಈ ಥೆರಪಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಕುರಿತು ಕೆ.ಪ್ರಭಾಕರ ಸಾಲ್ಯಾನ್ ಬಾಕಿಲ ಗೊತ್ತು ಮಾಲಕರು ನೆಮ್ಮದಿ ವೆಲ್ನ ಸೆಂಟರ್ ಪುತ್ತೂರು ಇವರು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಸತೀಶ್ ಎಳ್ಳುಗದ್ದೆ ಪ್ರೇಮ, ಸೇವಾ ಪ್ರತಿನಿಧಿ ತಾರಾನಾಥ್, ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯನ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ಡಿ.12 ರಿಂದ 26ರವರೆಗೆ ನಡೆಯಲಿರುವುದು. ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸದಸ್ಯರು ಮತ್ತು ಸಿಬ್ಬಂದಿ ವರ್ಗ ಸಹಕರಿಸಿದರು.