ಸದಸ್ಯರು ತಂದ ಅವಿಶ್ವಾಸ ನಿರ್ಣಯ ಮಂಡನೆ ಯಶಸ್ವಿ – ಅಧ್ಯಕ್ಷಗಾದಿ ಕಳೆದುಕೊಂಡ ಪುದುವೆಟ್ಟು ಗ್ರಾ. ಪಂ ಅಧ್ಯಕ್ಷೆ ಅನಿತಾ ಕುಮಾರಿ – ಉಪಾಧ್ಯಕ್ಷ ಪೂರ್ಣಾಕ್ಷ ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ

0

p>

ಪುದುವೆಟ್ಟು: ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಕುಮಾರಿರವರ ವಿರುದ್ಧ ಸದಸ್ಯರು ತಂದ ಅವಿಶ್ವಾಸ ನಿರ್ಣಯ ಮಂಡನೆ ಯಶಸ್ವಿಯಾಗಿದ್ದು, ಅಧ್ಯಕ್ಷರು ತಮ್ಮ ಅಧ್ಯಕ್ಷಗಾದಿಯನ್ನು ಕಳೆದುಕೊಂಡಿದ್ದಾರೆ. ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತರ ಆಡಳಿತವಿದ್ದು, ಅಧ್ಯಕ್ಷರಾಗಿ ಅನಿತಾ ಕುಮಾರಿ ಕಳೆದ ಒಂದೂವರೆ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಆದರೆ ಇತ್ತಿಚೀನ ದಿನಗಳಲ್ಲಿ ನಡೆದ ಕೆಲವೊಂದು ಬೆಳವಣಿಗೆಯಲ್ಲಿ ಅಧ್ಯಕ್ಷರ ವಿರುದ್ದ ಅವರದೇ ಪಕ್ಷ ಬೆಂಬಲಿತ ಸದಸ್ಯರು ಅಸಮಾಧಾನಗೊಂಡು, ಅಧ್ಯಕ್ಷರ ಪದಚ್ಯುತಿಗೆ ನ. 20 ರಂದು ಪುತ್ತೂರು ಎ. ಸಿ ಯವರಿಗೆ ಅವಿಶ್ವಾಸ ಸೂಚನಾ ಪತ್ರ ಸಲ್ಲಿಸಿದ್ದರು.

ಡಿ. 12 ರಂದು ಬೆಳಿಗ್ಗೆ ಪುತ್ತೂರು ಸಹಾಯಕ ಕಮೀಷನ‌ರ್ ಉಪಸ್ಥಿತಿಯಲ್ಲಿ ಅವಿಶ್ವಾಸ ಸೂಚನೆ ನಿರ್ಣಯ ಸಭೆ ನಡೆಯಿತು. ಅಧ್ಯಕ್ಷರ ವಿರುದ್ಧ 7 ಮಂದಿ ಹಾಗೂ ಅಧ್ಯಕ್ಷರ ಪರ ಒಬ್ಬರು ಕೈ ಎತ್ತಿ ಬೆಂಬಲ ಸೂಚಿಸಿದರು. ಇದರಿಂದಾಗಿ ಅಧ್ಯಕ್ಷ ತಮ್ಮ ಅಧ್ಯಕ್ಷಗಾದಿಯನ್ನು ಕಳೆದುಕೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನದಲ್ಲಿದ್ದ ಪೂರ್ಣಾಕ್ಷ ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here