p>
ಧರ್ಮಸ್ಥಳ: ಬೆಂಗಳೂರಿನ ದಾಸರಹಳ್ಳಿ ಊರಿನ ಮಹಿಳೆ ಮನೆಯಲ್ಲಿ ಜಗಳವಾಡಿ ಡಿ. 7ರಂದು ರಾತ್ರಿ ಬಸ್ಸು ಹತ್ತಿ ಧರ್ಮಸ್ಥಳಕ್ಕೆ ಡಿ. 8ರಂದು ಬೆಳಗ್ಗೆ ಬಂದು ಸಾರ್ವಜನಿಕರ ಮೊಬೈಲಿನಲ್ಲಿ ತನ್ನ ಗಂಡನಿಗೆ ಕರೆ ಮಾಡಿ ನಾನು ನೇತ್ರಾವತಿ ನದಿಗೆ ಬಿದ್ದು ಸಾಯುತ್ತೇನೆ ಎಂದು ಹೇಳಿ ಹೋಗಿದ್ದರು.
ತಕ್ಷಣ ಗಂಡ ಅದೇ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಆಟೋ ಚಾಲಕರಿಗೆ ಫೋನ್ ನೀಡುವಂತೆ ತಿಳಿಸಿದರು. ಅಲ್ಲಿದ್ದ ಸದಾಶಿವ ಎಂಬ ಆಟೋ ಚಾಲಕ ವಿಷಯ ತಿಳಿದು ತಕ್ಷಣ ಶೌರ್ಯ ವಿಪತ್ತು ತಂಡದ ಮಾಸ್ಟರ್ ಪ್ರಕಾಶ್ ರವರಿಗೆ ಕರೆ ಮಾಡಿ ವಿಷಯ ತಿಳಿಸಿದರು.
ತಕ್ಷಣ ಸ್ಪಂದಿಸಿದ ಶೌರ್ಯ ತಂಡ ನೇತ್ರಾವತಿ ಧರ್ಮಸ್ಥಳದಲ್ಲಿ ಹುಡುಕಾಟವನ್ನು ಶುರು ಮಾಡಿದರು. ಸತತ ಮೂರು ಗಂಟೆಗಳ ಕಾಲ ಹುಡುಕಾಟದಲ್ಲಿ ತೊಡಗಿರುವಾಗ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಕುಳಿತಿರುವುದು ಕಂಡುಬಂದಿದ್ದು, ತಕ್ಷಣ ಫೋಟೋ ತೆಗೆದು ಗಂಡನಿಗೆ ಕಳಿಸಿರುತ್ತಾರೆ. ನಂತರ ವಿಚಾರಿಸಿ ಧರ್ಮಸ್ಥಳ ಪೊಲೀಸರಿಗೆ ಒಪ್ಪಿಸಿದರು. ಕರೆದುಕೊಂಡು ಹೋಗಲು ಬರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.