ಬಳ್ಳಮಂಜ: ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಮಡಂತ್ಯಾರು ಪೇಟೆಗೆ ಸಮೀಪವಿರುವ ತುಳುನಾಡಿನ ಹಿತಿಹಾಸ ಪ್ರಸಿದ್ಧ ನಾಗಕ್ಷೇತ್ರ ಬಳ್ಳಮಂಜ. ಈ ಕ್ಷೇತ್ರದ ಸೊಬಗಿಗೆ ತಕ್ಕಂತೆ ಇಲ್ಲಿ ಶ್ರೀ ಅನಂತೇಶ್ವರ ದೇವರ ದಿವ್ಯ ಸನ್ನಿಧಿ ಇದ್ದು, ಭಕ್ತ ಜನರ ಇಷ್ಟಾರ್ಥವನ್ನು ಈಡೇರಿಸುವ ಶ್ರದ್ದಾ ಕೇಂದ್ರವಾಗಿರುತ್ತದೆ. ತುಳುನಾಡಿನ ಇತಿಹಾಸದ ಪ್ರಕಾರ ಬಳ್ಳಮಂಜ ಎಂದರೆ ಬೆಳ್ಳಿಯ ಹುತ್ತ ಎಂದು ವ್ಯಾಖ್ಯಾನಿಸುತ್ತಾರೆ. ವರ್ಷಂಪ್ರತಿಯಂತೆ ಜರಗುವ ಷಷ್ಠಿ ಮಹೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಜರಗಿತು. ಡಿ.7ರಂದು ಬೆಳಿಗ್ಗೆ 7ರಿಂದ ಷಷ್ಠಿ ಉತ್ಸವ ಪ್ರಾರಂಭಗೊಂಡು ಗಂಟೆ 11ಕ್ಕೆ ಬ್ರಹ್ಮರಥೋತ್ಸವ ನಡೆಯಿತು.
ಅಪರಾಹ್ನ 12.30ಕ್ಕೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು. ರಾತ್ರಿ 7ಕ್ಕೆ ಕಟ್ಟೆ ಪೂಜೆ, ದರ್ಶನ ಬಲಿ, ಡಿ.8ರಂದು ಮಹಾಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ. ಆನುವಂಶಿಯ ಆಡಳಿತ ಮೊಕ್ತೇಸರ ಡಾ. ಎಂ. ಹರ್ಷ ಸಂಪಿಗೆತ್ತಾಯ, ಸಿಬಂದಿವರ್ಗ, ಅರ್ಚಕ ವೃಂದ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸಿದ್ದರು.