ಸಾಯಿರಾಮ್ ಫ್ರೆಂಡ್ಸ್ ವತಿಯಿಂದ ವಸಂತಿಯವರ ಕನಸಿನ ಮನೆಗೆ ಭೂಮಿ ಪೂಜೆ – ಸುದ್ದಿ ನ್ಯೂಸ್ ಫಲಶ್ರುತಿ

0

p>

ಅಮರ್ಜಲ್: ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವಸಂತಿ ಆನ್ಲೈನ್ ದಂಧೆಯಿಂದಾಗಿ ತನ್ನ 65,000 ಮೊತ್ತವನ್ನು ಕಳೆದುಕೊಂಡಿದ್ದರು. ಕೆನರಾ ಬ್ಯಾಂಕ್ ನಿಂದ ಕರೆ ಮಾಡಿರುವುದಾಗಿ ಹೇಳಿ ವಸಂತಿಯವರ ಅಕೌಂಟ್ ನಲ್ಲಿದ್ದ ಸಾಲದ 65,000 ಮೊತ್ತವನ್ನು ದೋಚಿದ್ದರು.

ಈ ಬಗ್ಗೆ ಸುದ್ದಿ ನ್ಯೂಸ್ ಕಳೆದ ಮೂರು ತಿಂಗಳ ಹಿಂದೆ ವಿಸ್ತ್ರುತವಾಗಿ ವರದಿ ಮಾಡಿತ್ತು. ಈ ಸುದ್ದಿ ನೋಡಿ ಸ್ಪಂದಿಸಿದ ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ಗುರುವಾಯನಕೆರೆ ವಸಂತಿಯವರಿಗೆ ನಾವು ಮನೆಯ ವ್ಯವಸ್ಥೆ ಮಾಡಿಕೊಡುತ್ತೇವೆ ಅನ್ನುವ ಭರವಸೆಯನ್ನು ಕೊಟ್ಟಿದ್ದರು. ಇದೀಗ ಅವರು ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ.

ಕುವೆಟ್ಟು ಗ್ರಾಮದ ಅಮರ್ಜಾಲು ಬಳಿ ದಾನಿಯೊಬ್ಬರು ಕೊಟ್ಟ ಎರಡು ಮುಕ್ಕಾಲು ಸೆನ್ಸ್ ಜಾಗದಲ್ಲಿ ಇವತ್ತು ಭೂಮಿ ಪೂಜೆ ನೆರವೇರಿಸಲಾಯಿತು. ನವಶಕ್ತಿಯ ಶಶಿಧರ್ ಶೆಟ್ಟಿ ಬರೋಡ, ಶಾಸಕ ಹರೀಶ್ ಪೂಂಜ ಸೇರಿಕೊಂಡು ಭೂಮಿ ಪೂಜೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರದ ಶಶಿರಾಜ್ ಶೆಟ್ಟಿ, ಪ್ರದೀಪ್ ಶೆಟ್ಟಿ ಹಾಗೂ ಸದಸ್ಯರು, ಶ್ರೀ ಕ್ಷೇತ್ರ ಅರಮಲೆ ಬೆಟ್ಟದ ಆಡಳಿತ ಮುಕ್ತೆಸರಾಗಿರುವ ಸುಕೇಶ್ ಕುಮಾರ್, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ, ಬಿಜೆಪಿ ಮುಖಂಡ ಪ್ರಭಾಕರ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಸಂತಿಯವರು ಸುದ್ದಿ ನ್ಯೂಸ್ ಗೆ ಹಾಗೂ ಸಾಯಿರಾಮ್ ಫ್ರೆಂಡ್ಸ್ ಗುರುವಾಯನಕೆರೆ ಇವರಿಗೆ ಧನ್ಯವಾದ ಅರ್ಪಿಸಿದ್ದಾರೆ.

LEAVE A REPLY

Please enter your comment!
Please enter your name here