ಬೆಳ್ತಂಗಡಿ: ಬೆಳ್ಳಾರೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಆರೋಪಿ ಪಡಂಗಡಿ ಗ್ರಾಮದ ಪೊಯ್ಕೆಗುಡ್ಡೆ ನಿವಾಸಿ ನೌಷದ್ (27) ಮನೆಗೆ ಬೆಂಗಳೂರಿನಿಂದ ಬಂದ ಐದು ಜನರ ಎನ್.ಐ.ಎ ತಂಡ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ತಲೆಮಾರಿಸಿಕೊಂಡಿದ್ದ ತಾಯಿ ತಂಗಿಯನ್ನು ಕರೆತಂದು ವಿಚಾರಣೆ ಮುಂಜಾನೆ ಸುಮಾರು 6 ಗಂಟೆ ವೇಳೆಗೆ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಅಧಿಕಾರಿಗಳು ಆರೋಪಿ ನೌಷದ್ ಮನೆಗೆ ಡಿ. 05 ರಂದು ದಾಳಿ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ಬರುವ ಮಾಹಿತಿ ತಿಳಿದ ತಾಯಿ ದುಲೇಖ ರಾತ್ರಿ ವೇಳೆಗೆ ಮನೆಗೆ ಬೀಗ ಹಾಕಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.
ಅವರ ಬೆನ್ನು ಹತ್ತಿದ ಬೆಂಗಳೂರಿನ ಎನ್. ಐ. ಎ, ಡಿ.ವೈ.ಎಸ್ಪಿ, ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಕುವೆಟ್ಟು ಗ್ರಾಮದ ಮದ್ದಡ್ಕ ಆಸು ಪಾಸಿನಲ್ಲಿ ತಲೆಮರೆಸಿಕೊಂಡಿದ್ದ ತಾಯಿ ದುಲೇಖ ಹಾಗೂ ತಂಗಿ ತಶ್ರೀಫ್ ರನ್ನು ಪೊಯ್ಯೇಗುಡ್ಡೆ ಮನೆಗೆ ವಾಪಾಸ್ ಕರೆತಂದಿದ್ದಾರೆ. ಇದೀಗ ಮನೆಯೊಳಗಡೆ ಪೊಲೀಸ್ ಸರ್ಪಗಾವಲಿನಲ್ಲಿ ವಿಚಾರಣೆ ನಡೆಯುತ್ತಿದೆ.
ನೌಷದ್ ಪತ್ತೆಗಾಗಿ ಎನ್.ಐ.ಎ 2 ಲಕ್ಷ ರಿವಾರ್ಡ್ ಘೋಷಣೆ ಮಾಡಿತ್ತು. ಎನ್.ಐ.ಎ ಅಧಿಕಾರಿಗಳಿಗೆ ಬೆಳ್ತಂಗಡಿ ಪೊಲೀಸರು ಸಾಥ್ ನೀಡಿದ್ದಾರೆ.