p>
ಮಿತ್ತಬಾಗಿಲು: ಪರಾರಿಗುಡ್ಡೆ ಕೃಷ್ಣಪ್ಪ ಪೂಜಾರಿರವರ ಪುತ್ರ ಪ್ರದೀಪ್ ಪೂಜಾರಿ (32 ವ) ಡಿ.4 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಇವರು ಮಂಗಳೂರಿನಲ್ಲಿ ಪಂಪ್ವೆಲ್ ಸಮೀಪದ ಹೊಟೇಲ್ ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಂಗಳೂರಿನಲ್ಲಿ ವಾಸುತ್ತಿದ್ದ ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮೂರನೇ ಪುತ್ರರಾಗಿದ್ದರು.
ಕಳೆದ ಮೂರು ತಿಂಗಳ ಹಿಂದೆ ಅತ್ತೆ ಮಗಳನ್ನು ಪ್ರೀತಿಸಿ ಸ್ಥಳೀಯ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಡಿ 3ರಂದು ಮನೆಗೆ ಬಂದಿದ್ದರು. ಡಿ . 4ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಾಯಿ ಲೀಲಾ, ಪತ್ನಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.
p>