p>
ಇಂದಬೆಟ್ಟು: ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ (ನಿ.) ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರೇಣುಕಾ ವಸಂತ ಗೌಡ ಕಲ್ಲಾಜೆ ಹಾಗೂ ಉಪಾಧ್ಯಕ್ಷರಾಗಿ ಸುರೇಖಾ ನವೀನ್ ಜೈನ್ ಪಾದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿ. 03ರಂದು ಸಂಘದ ಕಛೇರಿಯಲ್ಲಿ ರಿಟರ್ನಿಂಗ್ ಅಧಿಕಾರಿ ಪ್ರತಿಮಾ ಬಿ.ವಿ ನೂತನ ಅಧ್ಯಕ್ಷರ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಬಿಜೆಪಿ ಬೆಂಬಲಿತರಾದ ಕುಸುಮಾವತಿ ಶಶಿಧರ ಗೌಡ, ಹೇಮಾವತಿ ವೆಂಕಪ್ಪ ಮೂಲ್ಯ, ಲೀಲಾ ಸನತ್ ಆಚಾರ್ಯ, ಸುಮಿತ್ರಾ ಕೆ, ಸೌಮ್ಯಾ ಸುರೇಂದ್ರ ಕುಕ್ಕಿಮಾರು, ಸುಮತಿ ಶೇಖರಗೌಡ ಕುದುರು, ಅಕ್ಕಮ್ಮ ಶ್ರೀಧರ ಮುಗೇರ ನೇತ್ರಾವತಿ ನಗರ, ಪ್ರೇಮಾ ವಿದ್ಯಾನಂದ ಗುಡಿಗಾರ್, ವಿನುತಾ ಡಿ. ಸುದೀಶ್ ಕುಮಾರ್, ಕಾಂಗ್ರೆಸ್ ಬೆಂಬಲಿತರಾದ ಆಶಾ ಗಣೇಶ್, ಎಲ್ಸಿ ಉಪಸ್ಥಿತರಿದ್ದರು.
p>