ಬಂಗಾಡಿ: ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ

0

p>

ಬಂಗಾಡಿ: ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ ನಿ. ಇದರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕ ಪೂಂಜಾ ನೇತೃತ್ವದಲ್ಲಿ ಇಂದಬೆಟ್ಟು, ನಾವೂರು, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ, ಕನ್ಯಾಡಿ ಗ್ರಾಮದ ಕಾರ್ಯಕರ್ತರ ಸಭೆ ಕೊಲ್ಲಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು 5 ವರ್ಷಗಳ ಹಿಂದೆ ಪ್ರಥಮ ಬಾರಿಗೆ ಆಡಳಿತಕ್ಕೆ ಬಂದ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿಯ ಅಭೂತಪೂರ್ವ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದಿನ ಆಡಳಿತ ಹಾಗೂ ಬಿಜೆಪಿ ಬೆಂಬಲಿತ ಈಗಿನ ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ತುಲನೆ ಮಾಡಿದರು. 2018ರಲ್ಲಿ ವಾರ್ಷಿಕ ಲಾಭ 2 ಕೋಟಿ 31 ಲಕ್ಷ ಇದ್ದು, ಪ್ರಸ್ತುತ 2024ರಲ್ಲಿ 4 ಕೋಟಿ 30 ಲಕ್ಷ, 2018 ರಲ್ಲಿ ವಾರ್ಷಿಕ ವ್ಯವಹಾರ 415.28 ಕೋಟಿ, 2024 ರಲ್ಲಿ 1020.75 ಕೋಟಿ, ಈ ವರ್ಷ ಶೇಕಡಾ 17% ಡಿವಿಡೆಂಡ್, ಕಡಿರುದ್ಯಾವರ ಹಾಗೂ ಕನ್ಯಾಡಿಯಲ್ಲಿ ನಿರ್ಮಾಣಗೊಂಡಿರುವ ನೂತನ ಶಾಖೆ ಕಟ್ಟಡ, ರೈತ ಸದಸ್ಯರ ಮಕ್ಕಳಿಗೆ ವಿಧ್ಯಾರ್ಥಿ ನಿಧಿ ಪ್ರೋತ್ಸಾಹ ಧನ 5 ವರ್ಷಗಳಲ್ಲಿ 4 ಲಕ್ಷದಷ್ಟು ವಿತರಣೆ, ಕೇಂದ್ರ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆಯಲ್ಲಿ ಸಂಘದ 3765 ರೈತ ಸದಸ್ಯರು 1,33,28,263 ಮೊಬಲಗನ್ನು ವಿಮಾ ಕಂತುಗಳ ಮೂಲಕ ಪಾವತಿಸಿ ಸಂಭಂದಪಟ್ಟ ವರ್ಷಗಳಲ್ಲಿ ತಮಗಾದ ಬೆಳೆ ಹಾನಿಯ ಮೊತ್ತವನ್ನು ರೈತರು ತಮ್ಮ ತಮ್ಮ ಖಾತೆಗಳಿಗೆ ನೇರವಾಗಿ ಪಡೆದುಕೊಂಡಿರುತ್ತಾರೆ. ಸೌಹಾರ್ದ ಕ್ರೆಡಿಟ್ ಸಾಲದ ಮೊತ್ತವನ್ನು 50,000 ದಿಂದ 1 ಲಕ್ಷದವರೆಗೆ ವಿಸ್ತರಿಸಿರುವುದು ಹಾಗೆಯೇ ನೂತನ ಸೌಭಾಗ್ಯ ಕಿರು ಸಾಲ ಯೋಜನೆ ಜಾರಿಗೆ ತಂದು ಕನಿಷ್ಠ 50 ಸಾವಿರ ಅರ್ಥಿಕ ನೆರವನ್ನು ಸಾಲದ ರೂಪದಲ್ಲಿ ನೀಡಿರುವುದು ವಿಶೇಷ ಪ್ರಶಂಸೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಇಂದಬೆಟ್ಟುವಿನಲ್ಲಿ ನಿರ್ಮಾಣವಾಗಲಿರುವ ಪೆಟ್ರೋಲ್ ಪಂಪ್, ಬಂಗಾಡಿಯಲ್ಲಿ ನಿರ್ಮಾಣವಾಗಲಿರುವ ಕೇಂದ್ರ ಕಛೇರಿ ಮತ್ತು ಇನ್ನಷ್ಟು ರೈತ ಸದಸ್ಯರ ಬಡವರ ಸೇವೆ ಮಾಡಲು ಡಿ. 8ರಂದು ನಡೆಯಲಿರುವ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಮತದಾರರು 12 ಕ್ಕೆ 12 ಸ್ಥಾನಗಳನ್ನು ಬಿಜೆಪಿ ಬೆಂಬಲಿತರನ್ನು ಗೆಲ್ಲಿಸುವ ಮೂಲಕ ಜನಪ್ರಿಯ ಆಡಳಿತಕ್ಕೆ ಮತ್ತೊಮ್ಮೆ ಅವಕಾಶ ಮಾಡಿಕೊಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸತತ ಎರಡನೇ ಅವಧಿಗೆ ಇಂದಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ಹಾಗೂ ಮಲವಂತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಮಾನ್ಯ ಶಾಸಕರು ಶಾಲು ಹೊದಿಸಿ ಗೌರವಿಸಿ ಅಭಿನಂದನೆ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಲಾಯಿಲ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಕಾಶ್ ಜೈನ್, ಪ್ರಭಾರಿ ಸದಾನಂದ ಉಂಗಿಲಬೈಲು, ಸಹಕಾರ ಭಾರತಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ವೆಂಕಪ್ಪಯ್ಯ, ಜಯಂತ್ ಗೌಡ ಗುರಿಪಳ್ಳ, ಹಾಲಿ ಅಭ್ಯರ್ಥಿಗಳು ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲ್ಯಾನ್, ಉಪಾಧ್ಯಕ್ಷ ವಸಂತ ಗೌಡ ಕಲ್ಲಾಜೆ, ನಿರ್ದೇಶಕ ಅನಂದ ಗೌಡ, ರಮೇಶ್ ಕೆಂಗಾಜೆ, ರಘುನಾಥ, ಸತೀಶ್ ನಾಯ್ಕ್, ವಿನಯಚಂದ್ರ, ಹರೀಶ್ ಪೂಜಾರಿ, ಪ್ರಮೋದ್ ಕುಮಾರ್, ಶೀನಪ್ಪ ಗೌಡ, ವೇದಾವತಿ, ಸಿಎ ಬ್ಯಾಂಕ್ ನ ನಿಕಟಪೂರ್ವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪುಷ್ಪಲತಾ ಕೆ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ್ ಎನ್, ಚುನಾವಣಾ ಉಸ್ತುವಾರಿ ಅನಂದ ಅಡಿಲು, ಶ್ರೀನಿವಾಸ ಗೌಡ, ಶಕ್ತಿ ಕೇಂದ್ರದ ಅಧ್ಯಕ್ಷರುಗಳು, ಬೂತ್ ಸಮಿತಿಯ ಅಧ್ಯಕ್ಷ ಕಾರ್ಯದರ್ಶಿಗಳು, ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳು, ಪಕ್ಷದ ಅನನ್ಯ ಜವಾಬ್ದಾರಿ ನಿರ್ವಹಿಸುತ್ತಿರುವವರು, ಕಾರ್ಯಕರ್ತರು ಉಪಸ್ಥಿತರಿದ್ದು ಸಭೆಯನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here