ಬೆಳ್ತಂಗಡಿ: ಡಿ. ಕೆ. ಆರ್. ಡಿ. ಎಸ್ (ರಿ), ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ನ. 30 ರಂದು ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಮತ್ತು ಮಾಹಿತಿ ಕಾರ್ಯಕ್ರಮವು ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಮೀಡಿಯ ಅಪೋಸ್ತಲೇಟ್ ನಿರ್ದೇಶಕ ವಂದನೀಯ ಫಾ. ಮ್ಯಾಥ್ಯೂ ತಾಯೆಕಾಟಿಲ್ ಆಗಮಿಸಿ “ಜೀವನದಲ್ಲಿ ಯಾವುದೇ ಸುಖ ದುಃಖ, ನೋವುಗಳನ್ನು ಸಂತೋಷದಿಂದ ಸ್ವೀಕರಿಸಿಕೊಂಡು ಬದುಕೋಣ” ಎಂದು ಮಾತನಾಡಿ, ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು.
ಕಾಂಚಾಲ್ ಪೂಜಾ ಸ್ವ-ಸಹಾಯ ಸಂಘದ ಸದಸ್ಯರು ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮಕ್ಕೆ ಧನಸಹಾಯ ನೀಡಿದರು. ಸಂಘದ ಸದಸ್ಯೆ ಶೃುತಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪ್ರೇಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ನಿರ್ದೇಶಕ ವಂದನೀಯ ಫಾ. ಬಿನೋಯಿ ಎ. ಜೆ “ನಮ್ಮ ಪರಿಶ್ರಮ ಯಶಸ್ಸಿನ ಫಲದ ಕಡೆಗೆ ಜೀವನಕ್ಕೆ ಇನ್ನಷ್ಟು ಜೀವವನ್ನು ತುಂಬಬೇಕು” ಎಂದು ಪ್ರಾಸ್ತಾವಿಕ ನುಡಿಯನ್ನು ಆಡಿದರು. ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯೆ ಶಾರದಾ ಪ್ರಾರ್ಥನೆ ಹಾಡಿದರು.
ಸಂಸ್ಥೆಯ ಕಾರ್ಯಕರ್ತ ಜೋನ್ಸನ್ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕರ್ತ ಮಾರ್ಕ್ ಡಿ ಸೋಜ ನಿರೂಪಿಸಿದರು. ಸಂಸ್ಥೆಯ ವಿದ್ಯಾನಿಧಿ ಯೋಜನೆಯ ಸಂಯೋಜಕಿ ಜಿನಿ ಪಿ. ಜೆ. ಧನ್ಯವಾದವಿತ್ತರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.