ಮೂಡುಕೋಡಿ: ರಾಜ್ಯ ಯಕ್ಷಗಾನ ಅಕಾಡೆಮಿಯ ಯಕ್ಷ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ – ರಕ್ಷಿತ್ ಶಿವರಾಮ್

0

ಮೂಡುಕೋಡಿ: ಯಕ್ಷ ಬಳಗ ನಾರಾವಿ ಇವರ ಆಶ್ರಯದಲ್ಲಿ ಯಕ್ಷ ಬಳಗ ಮೂಡುಕೋಡಿ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಇವರ ಸಹಯೋಗದೊಂದಿಗೆ ನಡೆದ ಶ್ರೀ ಆದಿ ದೂಮಾವತಿ ಶ್ರೀದೇಯಿಭೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ – ಗೆಜ್ಜೆಗಿರಿ ಮೇಳದ ಗೆಜ್ಜೆಸೇವೆ ಬಪ್ಪನಾಡು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.

ಈ ವರ್ಷದ ತಿರುಗಾಟ ಪ್ರಾರಂಭಿಸಿದ ನಂತರದ ಪ್ರಥಮ ಸೇವೆಯನ್ನು ಇಲ್ಲಿ ನಡೆಸಿಕೋಡಲಾಯಿತ್ತು. ಈ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ವೇಣೂರು ಮಹಾಲಿಂಗೇಶ್ವರ ದೇವಸ್ಥಾನ ಮಾಜಿ ಅಧ್ಯಕ್ಷ ಜಯರಾಮ ಶೆಟ್ಟರು, ನಮನ ಕ್ಲಿನಿಕ್ ನ ವೈದ್ಯ ಡಾ.ಶಾಂತಿಪ್ರಸಾದ್, ವರ್ತಕರ ಸಂಘದ ಅಧ್ಯಕ್ಷ ಬಾಸ್ಕರ್ ಪೈ, ಜ್ಯೋತಿಷಿ ಗಣೇಶ್ ನಾರಾಯಣ ಪಂಡಿತ್, ಸತೀಶ್ಚಂದ್ರ ಸಾಲ್ಯಾನ್, ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ಶುಭಕರ ಪೂಜಾರಿ ಸಾವ್ಯ, ಪ್ರಕಾಶ್ ಡೊಂಕಬೆಟ್ಟು ಮುಂತಾದವರು ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ವೇಣೂರಿನ ಸುಪ್ರಸಿದ್ಧ ವೈದ್ಯ ಡಾ. ಶಾಂತಿ ಪ್ರಸಾದ್, ಕಂಬಳ ಕ್ಷೇತ್ರದ ಸಾಧಕರಾದ ಗಣೇಶ್ ನಾರಾಯಣ ಪಂಡಿತ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ಚಂದ್ರ ಸಾಲ್ಯಾನ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಜೆಸ್ಸಿ ಪಿರೇರಾ, ಯುವ ಭಾಗವತರಾದ ಸಿಂಚನಾ ಮೂಡುಕೋಡಿ, ಶಾರೀರಿಕ ನಿರ್ದೇಶಕ ರವಿರಾಮ್ ಶೆಟ್ಟಿ, ಕಂಗೀಲು ಸೇವೆ ನಾದೇಲ ಕಲ್ಯರಡ್ಡ, ದೈವ ನರ್ತಕ ಕೊರಗಪ್ಪ ನಲಿಕೆ, ನಾರಾಯಣ ಪರವ, ಸಮಾಜ ಸೇವಕ ಜಕ್ರಿಯ, ಯಕ್ಷಗಾನ ಪೋಷಕ ಶ್ರೀಧರ ಆಚಾರ್ಯ ಸರ್ವಧರ್ಮೀಯ ಸಾಧಕರನ್ನು ಸನ್ಮಾನಿಸಲಾಯಿತು. ಯಕ್ಷಗಾನದ ಪ್ರಾಯೋಜಕತ್ವವನ್ನು ವಹಿಸಿದ ರಕ್ಷಿತ್ ಶಿವರಾಂರನ್ನು ಗೌರವಿಸಲಾಯಿತು. ಶ್ರೀ ಕ್ಷೇತ್ರ ದೈಪಾಲಬೆಟ್ಟ ಸನ್ನಿಧಿಯ ಕಾರ್ಯದರ್ಶಿ ಶಶಿಧರ ಶೆಟ್ಟಿ ನಾರಡ್ಕಗುತ್ತು ಸ್ವಾಗತಿಸಿ, ಉಪನ್ಯಾಸಕ ಅರುಣ್ ಕೋಟ್ಯಾನ್ ನಿರೂಪಿಸಿ, ವೇಣೂರು ಯುವವಾಹಿನಿ ಘಟಕದ ಕಾರ್ಯದರ್ಶಿ ರಕ್ಷೀತ್ ಬಂಗೇರ ಅಂಡಿಂಜೆ ವಂದಿಸಿದರು. ಸಿಹಿ ಭೋಜನದ ಅನ್ನಪ್ರಸಾದದೊಂದಿಗೆ ಸಾವಿರಾರು ಕಲಾಭಿಮಾನಿಗಳು ಯಕ್ಷಗಾನವನ್ನು ವೀಕ್ಷಿಸಿದ್ದರು.

p>

LEAVE A REPLY

Please enter your comment!
Please enter your name here