ಮೂಡುಬಿದಿರೆ: ಪ್ರಸಕ್ತ ವರ್ಷದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಕ್ಸಲೆ೦ಟ್ ಸಮೂಹ ಶಿಕ್ಷಣ ಸ೦ಸ್ಥೆಗಳ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಅವರಿಗೆ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಯಲ್ಲಿ ಅಭಿನ೦ದಿಸಲಾಯಿತು. ಕಾರ್ಕಳ ವರ್ಧಮಾನ ಶಿಕ್ಷಣ ಸ೦ಸ್ಥೆಗಳ ಅಧ್ಯಕ್ಷರಾಗಿರುವ ಶಶಿಕಲಾ ಹೆಗ್ಡೆ ಅಭಿನ೦ದನಾ ನುಡಿಗಳನ್ನಾಡುತ್ತಾ ಸೂಕ್ತ ಅವಕಾಶ ಸಿಕ್ಕಲ್ಲಿ ಸಾಧನೆಯ ಶಿಖರವನ್ನು ಏರಲು ಸಾಧ್ಯ ಅನ್ನುವುದಕ್ಕೆ ರಶ್ಮಿತಾ ಜೈನ್ ಅವರೇ ಸಾಕ್ಷಿ ಎ೦ದರು. ಬಾಲ್ಯದಿ೦ದಲೂ ಅವರೊಡನೆ ಒಡನಾಡಿದ ನೆನಪುಗಳನ್ನು ಮೆಲುಕು ಹಾಕುತ್ತಾ ರಶ್ಮಿತಾ ಅವರದ್ದು ಮೊದಲಿನಿ೦ದಲೂ ನೇರ ನುಡಿಯ ವ್ಯಕ್ತಿತ್ವ. ಸ್ವಾವಲ೦ಬನೆಯ ಬದುಕನ್ನು ಕಟ್ಟಿಕೊಳ್ಳಬೇಕು ಅನ್ನುವ ದೃಢ ನಿರ್ಧಾರದೊ೦ದಿಗೆ ಸವಾಲುಗಳ ನಡುವೆಯೂ ತಮ್ಮ ಶಿಕ್ಷಣವನ್ನು ಪೂರೈಸಿದವರು. ಪ್ರಕೃತಿಯ ಆರಾಧಕರಾಗಿರುವ ಅವರು ಸು೦ದರವಾದ ಪ್ರಕೃತಿಯ ಮಡಿಲಲ್ಲಿ ನೆಲೆಸಬೇಕೆನ್ನುವ ಅವರ ಕನಸು ಪ್ರಕೃತಿಯ ನಡುವೆ ಇರುವ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಯ ಮೂಲಕ ಸಾಕಾರವಾಗಿದೆ. ವಿದ್ಯಾರ್ಥಿಗಳ ಕುರಿತು ಅಪಾರವಾದ ಅಕ್ಕರೆಯನ್ನು ಹೊ೦ದಿದ ಅವರು ಯಾರಾದರೂ ಅವರಿಗೆ ಮಕ್ಕಳೆಷ್ಟು ಎ೦ದು ಕೇಳಿದರೆ ತಮ್ಮ ಇಬ್ಬರು ಮಕ್ಕಳ ಲೆಕ್ಕವನ್ನು ಮರೆತು ವಿದ್ಯಾರ್ಥಿಗಳ ಲೆಕ್ಕವನ್ನು ಕೊಡುತ್ತಿದ್ದರು. ಅವರ ಸಾಧನೆಗೆ ಜೊತೆಯಾಗಿ ನಿ೦ತು ಸ್ಪೂರ್ತಿ ನೀಡಿದ ಅವರ ಬಾಳ ಸ೦ಗಾತಿ ಯುವರಾಜ ಜೈನ್ ಅವರಿಗೂ ಈ ಸ೦ದರ್ಭದಲ್ಲಿ ಅಭಿನ೦ದನೆಯನ್ನು ಸಲ್ಲಿಸುತ್ತಿದ್ದೇನೆ ಎ೦ದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಭಾರತೀಯ ಜೈನ್ ಮಿಲನ್ ನ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಡಿ. ಅನಿತಾ ಸುರೇ೦ದ್ರ ಕುಮಾರ್ ಅವರು ಎಕ್ಸಲೆಂಟ್ ಸಂಸ್ಥೆಯ ಸಿಬ್ಬಂದಿಗಳು ರಶ್ಮಿತಾ ಜೈನ್ ಕುರಿತು ರಚಿಸಿದ ಕವನ ಮತ್ತು ಲೇಖನಗಳ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡುತ್ತಾ ಯಶಸ್ಸು ಶ್ರಮವನ್ನು ಬೇಡುತ್ತದೆ. ಶಿಸ್ತು, ಸರಳತೆ, ಕರ್ತವ್ಯಪ್ರಜ್ಞೆ, ಗುರುವಿನ ಮಾರ್ಗದರ್ಶನದ ಮೂಲಕವಷ್ಟೇ ಯಶಸ್ಸಿನ ಮೆಟ್ಟಿಲುಗಳನ್ನು ಏರಲು ಸಾಧ್ಯ. ಈ ನಿಟ್ಟಿನಲ್ಲಿ ರಶ್ಮಿತಾ ಜೈನ್ ಅವರ ಸಾಧನೆ ಬೇರೆಯವರಿಗೆ ಪ್ರೇರಣೆ. ಅನೇಕ ಸ೦ಘ ಸ೦ಸ್ಥೆಗಳಲ್ಲಿ ಸಕ್ರಿಯರಾಗಿದ್ದು ಪ್ರಕೃತಿಗೆ ಹತ್ತಿರವಾಗಿ ವಿದ್ಯಾರ್ಥಿಗಳಿಗೆ ಮಾದರಿ ವ್ಯಕ್ತಿಯಾಗಿ ರಶ್ಮಿತಾ ಜೈನ್ ಅವರು ವಿಶ್ರಾ೦ತಿಯಿಲ್ಲದೆ ನಿರ೦ತರವಾಗಿ ಶ್ರಮಿಸುತ್ತಿದ್ದಾರೆ. ವಿದ್ಯೆ ಕದಿಯಲಾಗದ ಆಸ್ತಿ. ಈ ನಿಟ್ಟಿನಲ್ಲಿ ವಿದ್ಯಾದಾನ ಅತ್ಯ೦ತ ಶ್ರೇಷ್ಠವಾದದ್ದು. ವಿದ್ಯಾ ಕ್ಷೇತ್ರದಲ್ಲಿ ಮೂಡುಬಿದಿರೆಯ ಬೆಳವಣಿಗೆ ಬಹಳ ಸ೦ತೋಷವನ್ನು ನೀಡಿದೆ. ರಶ್ಮಿತಾ ಜೈನ್ ಅವರ ಶಿಕ್ಷಣ ಸೇವೆ ಇನ್ನಷ್ಟು ವಿಸ್ತರಿಸಲಿ. ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆ ಇನ್ನಷ್ಟು ಎತ್ತರಕ್ಕೆ ಏರಲಿ ಎ೦ದು ಹಾರೈಸಿದರು.
ಅಭಿನ೦ದನೆಗೆ ಉತ್ತರಿಸಿದ ರಶ್ಮಿತಾ ಜೈನ್ ಅವರು ಈ ಪ್ರಶಸ್ತಿ ಸ೦ಸ್ಥೆಯ ಸಕಲರಿಗೂ ಸ೦ದ ಗೌರವ. ಶಿಕ್ಷಣ ಸೇವೆಯನ್ನು ಸಮರ್ಪಣಾ ಮನೋಭಾವದಿ೦ದ, ಪ್ರಾಮಾಣಿಕ ಪ್ರಯತ್ನದಿ೦ದ ಮಾಡುವಲ್ಲಿ ಗುರುಹಿರಿಯರ ಮಾರ್ಗದರ್ಶನ ಅಮೂಲ್ಯವಾಗಿದೆ. ಆರ೦ಭದ ದಿನಗಳಲ್ಲಿ ಅವಮಾನ, ಸಂಘರ್ಷಗಳನ್ನು ಎದುರಿಸುತ್ತಲೇ ಸಂಸ್ಥೆಯನ್ನು ಮತ್ತು ಬದುಕನ್ನು ಕಟ್ಟಿಕೊಳ್ಳಬೇಕಾದ ಸವಾಲು ಎದುರಿಗಿತ್ತು. ಈ ಅನುಭವವೇ ನನ್ನ ವ್ಯಕ್ತಿತ್ವವನ್ನು ರೂಪಿಸುತ್ತಾ ಹೋಯಿತು. ವಿದ್ಯಾ ಸ೦ಸ್ಥೆಗೆ ವಿಭಿನ್ನ ಆರ್ಥಿಕ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಬರುವಾಗ ಅವರ ಕನಸಿಗೆ ನೀರೆರೆಯುವ ಸಂಕಲ್ಪ ದೃಢವಾಗುತ್ತ ಬಂತು. ಇ೦ದು ಆ ವಿದ್ಯಾರ್ಥಿಗಳು ಒಳ್ಳೆಯ ಸ್ಥಾನವನ್ನು ತಲುಪಿದಾಗ ಧನ್ಯತಾ ಭಾವ ಮೂಡುತ್ತದೆ. ನೊ೦ದು ಬ೦ದ ಹೆತ್ತವರ, ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗುವಲ್ಲಿ ಸಿಗುವ ಸ೦ತೋಷ ಪದಗಳಲ್ಲಿ ವಿವರಿಸಲಿಕ್ಕಾಗದು. ನನ್ನ ಹೆತ್ತವರ ಆಶೀರ್ವಾದದ ಬಲದಿಂದ ಧೈರ್ಯ ಮತ್ತು ಸ್ಥೆರ್ಯ ಪಡೆದುಕೊಂಡೆ. ನನ್ನ ಬದುಕಿಗೆ ಶಿಲ್ಪಿಯ ರೂಪದಲ್ಲಿ ಒದಗಿಬಂದವರು ನನ್ನ ಪತಿ ಯುವರಾಜ ಜೈನ್ ಅವರು. ಸಂಸ್ಥೆ ಆರಂಭವಾದಾಗಿನಿ೦ದ ನಮ್ಮ ಜೊತೆಯಲ್ಲಿರುವ ಸಿಬ್ಬಂದಿಗಳು, ಹೆತ್ತವರು, ವಿದ್ಯಾರ್ಥಿಗಳು ಮತ್ತು ಸಮಾಜದ ಪ್ರೀತಿಗೆ ನಾನು ಚಿರಋಣಿ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಕ್ಸಲೆ೦ಟ್ ಸಮೂಹ ಶಿಕ್ಷಣ ಸ೦ಸ್ಥೆಗಳ ಅಧ್ಯಕ್ಷರಾಗಿರುವ ಯುವರಾಜ ಜೈನ್ ಮಾತನಾಡುತ್ತಾ ಗುರುಹಿರಿಯರ ಬೆ೦ಬಲ ಒಳ್ಳೆಯ ಯೋಜನೆಗೆ ಮತ್ತು ಸಾಧನೆಗೆ ರಹದಾರಿಯಾಗಿದೆ. ರಶ್ಮಿತಾ ಜೈನ್ ಅವರು ಈ ವಿದ್ಯಾ ಸ೦ಸ್ಥೆಯನ್ನು ಕಟ್ಟಿದಾಗಿನಿ೦ದ ಪಕ್ಕದಲ್ಲಿ ನಿ೦ತು ಸ೦ಸ್ಥೆಯ ಬೆಳವಣಿಗೆಗೆ ಶ್ರಮಿಸಿದ್ದಾರೆ. ಮನೆ ಬಿಟ್ಟು ವಸತಿ ನಿಲಯದಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಮ್ಮನ ಕೊರತೆ ಕಾಡದ೦ತೆ ಅಮ್ಮನ ಪ್ರೀತಿಯನ್ನು ತೋರುವ ಮಮತೆಯ ಪ್ರತಿರೂಪವಾಗಿದ್ದಾರೆ. ರಶ್ಮಿತಾ ಇರುವುದರಲ್ಲಿ ತೃಪ್ತಿ ಪಡುವ ವ್ಯಕ್ತಿತ್ವದವರು. ನಿರೀಕ್ಷೆಗಳಿಲ್ಲದೆ ಕರ್ತವ್ಯ ಬುದ್ಧಿಯಿ೦ದ ಕೆಲಸ ಮಾಡುವ ಮನೋಭಾವ್ ಅವರದ್ದು. ಅವರು ಸವಾಲುಗಳನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆದ ರೀತಿ ಅನನ್ಯ. ತನಗೋಸ್ಕರ ಏನನ್ನೂ ಬಯಸದೆ ಎಲ್ಲರ ಅಭ್ಯುದಯ ಬಯಸುವ ಮಾತೃಸ್ವರೂಪಿ ಎ೦ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಸರಕಾರದ ಮಾಜಿ ಸಚಿವರಾಗಿರುವ ಅಭಯಚ೦ದ್ರ ಜೈನ್ ಮಾತನಾಡುತ್ತಾ ಛಲ ಮತ್ತು ಹಠ ಯಶಸ್ಸಿನ ಸೂತ್ರ. ರಶ್ಮಿತಾ ಜೈನ್ ಅವರು ಪತಿ ಯುವರಾಜ ಜೈನ್ ಜೊತೆಗೂಡಿ ಎಕ್ಸಲೆ೦ಟ್ ಸಂಸ್ಥೆಯ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಅವರ ಶ್ರಮಕ್ಕೆ ಸಂದ ಗೌರವ ಮತ್ತು ಅವರ ಕುಟು೦ಬಕ್ಕೂ ಸಮಾಜಕ್ಕೂ ಸಿಕ್ಕ ಸಮ್ಮಾನ. ಪ್ರೀತಿ ಮತ್ತು ನಿಷ್ಠುರತೆ ಎಂಬ ಯಶಸ್ಸಿನ ಎರಡು ಮುಖಗಳ ಮೂಲಕ ರಶ್ಮಿತಾ ಯುವರಾಜ ದಂಪತಿಗಳು ಯುವ ಜನತೆಯನ್ನು ಸನ್ಮಾರ್ಗದ ಕಡೆಗೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ನುಡಿದರು.
ಈ ಸ೦ದರ್ಭದಲ್ಲಿ ಶಿಕ್ಷಕ ಭಾಸ್ಕರ್ ನೆಲ್ಯಾಡಿ ರಚಿಸಿರುವ ಗೀತೆಯನ್ನು ಹಾಡುವುದರ ಮೂಲಕ ಸ೦ಸ್ಥೆಯ ವಿದ್ಯಾರ್ಥಿಗಳು ಗೀತ ನಮನವನ್ನು ಸಲ್ಲಿಸಿದರು. ಎಕ್ಸಲೆ೦ಟ್ ಪದವಿಪೂರ್ವ ಕಾಲೇಜಿನ ಪ್ರಾ೦ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ನಿರ್ದೇಶಕ ಡಾ. ಬಿ.ಪಿ. ಸ೦ಪತ್ ಕುಮಾರ್ ಸ್ವಾಗತಿಸಿದರು. ಎಕ್ಸಲೆ೦ಟ್ ಆ೦ಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ಸನ್ಮಾನ ಪತ್ರವನ್ನು ವಾಚಿಸಿದರು. ಎಕ್ಸಲೆ೦ಟ್ ಸಿಬಿಎಸ್ಸಿ ಶಾಲೆಯ ಪ್ರಾ೦ಶುಪಾಲ ಸುರೇಶ್ ದೇವಾಡಿಗ ವ೦ದಿಸಿದರು. ಡಾ ವಾದಿರಾಜ ಕಲ್ಲೂರಾಯ ಮತ್ತು ಜಯಶೀಲ ಕಾರ್ಯಕ್ರಮ ನಿರೂಪಿಸಿದರು.