ಉಜಿರೆ: ಸಂತ ಅಂತೋನಿ ಚರ್ಚ್ ಮುಂದಾಳತ್ವದಲ್ಲಿ ದಾನಿಗಳ ನೆರವಿನಿಂದ ನಿರ್ಮಾಣಗೊಂಡ 5ನೇ ಯೋಜನೆ ಅಶಕ್ತ ಕುಟುಂಬಕ್ಕೆ ಹೊಸಮನೆ ಆಶೀರ್ವಚನ ಮತ್ತು ಹಸ್ತಾಂತರ ಕಾರ್ಯಕ್ರಮ

0

ಉಜಿರೆ: ನೆಲ್ಲಪದವು ಉಜಿರೆ ಚರ್ಚ್ ಬಳಿ ಉಜಿರೆ ಸಂತ ಅಂತೋನಿ ಚರ್ಚ್, ಇದರ ಮುಂದಾಳತ್ವದಲ್ಲಿ 13 ಲಕ್ಷ ಅನುದಾನದಲ್ಲಿ ದಾನಿಗಳ ನೆರವಿನಿಂದ ನಿರ್ಮಾಣಗೊಂಡ
5ನೇ ಯೋಜನೆ ಅಶಕ್ತ ಕುಟುಂಬಕ್ಕೆ ‘ಅನುಗ್ರಹ’ ಹೊಸಮನೆ
ಆಶೀರ್ವಚನ ಮತ್ತು ಹಸ್ತಾಂತರ ಕಾರ್ಯಕ್ರಮವು ನ. 24ರಂದು ಜರಗಿತು.

ಫಲಾನುಭವಿಗಳಾದ ರೋಜಿ ಪಾಯ್ಸ್, ಸುನಿತಾ ಮೇಬಲ್, ಪ್ಲಾವಿಯಾ ಇವರ ಹೊಸ ಮನೆಯ ಆಶೀರ್ವಚನವನ್ನು
ಉಜಿರೆ ಸಂತ ಅಂತೋನಿ ಚರ್ಚ್ ಧರ್ಮಗುರು ವಂದನೀಯ ಅಬೆಲ್ ಲೋಬೋ ನೆರವೇರಿಸಿದರು.

ಹ್ಯುಮ್ಯಾನಿಟಿ ಟ್ರಸ್ಟ್ ನ ಸ್ಥಾಪಕರು ರೋಶನ್ ಡಿಸೋಜ ಬೆಳ್ಮನ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರು ಉಷಾ ಕಿರಣ್ ಕಾರಂತ್, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ ವಿಜಯ್ ಲೋಬೊ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ವಾಳೆಯ ಗುರಿಕಾರ ಮರ್ಲಿನ್ ಡಿಸೋಜಾ, ಕಾರ್ಯದರ್ಶಿ ಲಿಗೋರಿ ವಾಸ್ ದಯಾಳ್‌ಭಾಗ್ ಆಶ್ರಮದ ವ. ಎಡ್ವಿನ್ ಡಿಸೋಜಾ, ದಯಾ ಸ್ಪೆಷಲ್ ಸ್ಕೂಲ್ ನಿರ್ದೇಶಕ ವಂದನೀಯ ಧರ್ಮಗುರು ವಿನೋದ್ ಮಸ್ಕರೇನಸ್, ಉಜಿರೆ SMI ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ನ್ಯಾನ್ಸಿ ಡಾಯಸ್, SVP ಉಜಿರೆ ಘಟಕ ಅಧ್ಯಕ್ಷರು ಸೆಬಾಸ್ಟಿಯನ್ ಡಿಸೋಜ, ರೋಶನ್ ಡಿಸೋಜಾ, ಪಂಚಾಯತ್ ಸದಸ್ಯರು ಹಾಗೂ ಕಟ್ಟಡ ನಿರ್ಮಾಣ ಗುತ್ತಿಗೆದಾರರು ಅನಿಲ್ ಡಿಸೋಜಾ,
ಆಯೋಗ ಸಂಯೋಜಕಿ ಲವೀನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯದರ್ಶಿ ಲಿಗೋರಿ ವಾಸ್ ಸ್ವಾಗತಿಸಿದರು. ಯೋಜನಾ ಮುಖ್ಯಸ್ಥ ಆಂಟೋನಿ ಫೆರ್ನಾಂಡಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚರ್ಚ್ ಪಾಲನಾ ಮಂಡಳಿ ಸದಸ್ಯರು, ದಾನಿಗಳು ಹಾಗೂ ಸಮಸ್ತ ಭಕ್ತ ಸಮೂಹ ಸಂತ ಅಂತೋನಿ ಚರ್ಚ್ ಉಜಿರೆ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here