ಕಲ್ಮಂಜ: ಅಕ್ಷಯನಗರ ನಿವಾಸಿ ಪ್ರಮೋದ್ ಗೌಡ(35 ವ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ.21 ರಂದು ರಾತ್ರಿ ನಡೆದಿದೆ.
ವೃತ್ತಿಯಲ್ಲಿ ಆಟೋ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ರಾತ್ರಿ ಊಟ ಮುಗಿಸಿ ಕಬಡ್ಡಿ ಪಂದ್ಯಾಟ ವೀಕ್ಷಣೆಯನ್ನು ಮಾಡುತ್ತಿದ್ದರು ಇವರ ತಂದೆ ಮೋನಪ್ಪ ಗೌಡ ಊಟ ಮಾಡಿ ಮಲಗಿದ ನಂತರ ಸ್ವಗೃಹದಲ್ಲಿ ಈ ದುರ್ಘಟನೆ ನಡೆದಿದೆ.
ಟಿವಿ ಹಾಕಿರುವುದು ಹಾಗೆ ಇದ್ದ ಕಾರಣ ತಂದೆ ಸರಿಸುಮಾರು 12:00 ಗಂಟೆಗೆ ಆಫ್ ಮಾಡಲು ಬಂದಾಗ ಈ ವಿಚಾರದ ಬಗ್ಗೆ ತಿಳಿದಿದೆ.
ಮನೆಯಲ್ಲಿ ಅಕ್ಕನ ಮಗ ಒಟ್ಟಿಗೆ ವಾಸವಾಗಿದ್ದರು. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
p>