




ಉಜಿರೆ: ಎಸ್ ಡಿ ಎಂ ಆಯುರ್ವೇದ ಮೆಡಿಕಲ್ ಕಾಲೇಜ್ ತೆರೆದಾಳ ಹಾಗೂ ರಾಜೀವ್ ಗಾಂಧಿ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕರ್ನಾಟಕ ಬೆಂಗಳೂರು ಇವರು ಯೋಜನೆ ಮಾಡಿದ ಸಿಂಗಲ್ ಜೋನ್ ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಉಜಿರೆಯ ಎಸ್ ಡಿ ಎಂ ನ್ಯಾಚುರಪತಿ ಕಾಲೇಜ್ ತಂಡವು ಚಾಂಪಿಯನ್ ಗಳಿಸಿದೆ.


ಸೆಮಿ ಫೈನಲ್ ಪಂದ್ಯಾಟದಲ್ಲಿ 2023 ನೇ ಸಾಲಿನ ಹ್ಯಾಂಡ್ ಬಾಲ್ ಚಾಂಪಿಯನ್ ಬೆಂಗಳೂರು ಮೆಡಿಕಲ್ ಕಾಲೇಜ್ ತಂಡವನ್ನು 1 – 0 ಅಂಕದಿಂದ ಪರಾಭವಗೊಳಿಸಿ, ಫೈನಲ್ ಪಂದ್ಯಾಟದಲ್ಲಿ ತೆರದಾಳ ಎಸ್ ಡಿ ಎಂ ಆಯುರ್ವೇದ ಮೆಡಿಕಲ್ ಕಾಲೇಜ್ ತಂಡವನ್ನು 4 – 0 ಅಂಕದಿಂದ ಪರಾಭಾವಗೊಳಿಸಿ ಚಾಂಪಿಯನ್ ಆಗಿ ಮೂಡಿ ಬಂದಿದೆ.
ಈ ತಂಡಕ್ಕೆ ಎಸ್ ಡಿ ಎಮ್ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿ ರಮೇಶ್ ಹೆಚ್ ಮಾರ್ಗದರ್ಶನವನ್ನು ನೀಡಿ ಹಾಗೂ ಕ್ಲಬ್ ನ ಹ್ಯಾಂಡ್ ಬಾಲ್ ತರಬೇತುದಾರ ಸುದಿನ ತರಬೇತಿ ನೀಡಿರುತ್ತಾರೆ. ನ್ಯಾಚುರಪತಿ ಕಾಲೇಜಿನ ದೈಹಿಕ ನಿರ್ದೇಶಕ ಧರ್ಮೇಂದ್ರ ಕುಮಾರ್ ಮಾರ್ಗದರ್ಶನದೊಂದಿಗೆ ತರಬೇತಿಯನ್ನು ನೀಡಿರುತ್ತಾರೆ.









