ಗೇರುಕಟ್ಟೆ: ಪರಪ್ಪುವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ನ ವರ್ಷಂಪ್ರತಿ ಜರಗುವ ಉರೂಸ್ ಕಾರ್ಯಕ್ರಮವು ಜಮಾಅತ್ ಖಾಝಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ನಿರ್ದೇಶನದಂತೆ 2025 ಜ.14 ರಿಂದ 18 ರವರೆಗೆ ನಡೆಯಲಿರುವುದು. ಪರಪ್ಪು ಜಮಾಅತ್ ನಲ್ಲಿ ನ.15ರಂದು ಉರೂಸ್ ಬಾಬ್ತು ನಡೆದ ವಿಶೇಷ ಜಮಾಅತ್ ಸಭೆಯಲ್ಲಿ ಜಮಾಆತ್ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಅಧ್ಯಕ್ಷತೆಯಲ್ಲಿ, ಖತೀಬರಾದ ಎಫ್.ಎಚ್ ಮುಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ರವರ ಮಾರ್ಗದರ್ಶನದಲ್ಲಿ ಸರ್ವಾನುಮತದಿಂದ ಜಮಾಅತ್ ಪ್ರಧಾನ ಕಾಯದರ್ಶಿ ಅಬ್ದುಲ್ ಕರೀಮ್ ಪ್ರಸ್ತಾವನೆಯಂತೆ ಜಮಾಅತ್ ಆಡಳಿತ ಸಮಿತಿಯ ನಿರ್ದೇಶನದಂತೆ ಉರೂಸ್ ಸಮಿತಿಯನ್ನು ರಚಿಸಲಾಯಿತು.
ಖಾಝಿಯವರ ಅಧಿಕೃತ ಆದೇಶದಂತೆ ಜಮಾಅತ್ ಗೌರವಾದ್ಯಕ್ಷರಾಗಿ ಸೈಯ್ಯದ್ ಜಮಾಲುಲೈಲಿ ಝೈನುಲ್ ಆಬಿದೀನ್ ತಂಙಳ್ ಕಾಜೂರುರವರನ್ನು ನೇಮಿಸಿದರು. ಉರೂಸ್ ಸಮಿತಿಯ ಅಧ್ಯಕ್ಷರಾಗಿ ಯುವ ಸಂಘಟಕ ಗೇರುಕಟ್ಟೆಯ ಜಿ.ಡಿ.ಅಶ್ರಫ್, ಪ್ರಧಾನ ಕಾರ್ಯದರ್ಶಿಯಾಗಿ ಸೈಫುಲ್ಲಾ ಎಚ್.ಎಸ್, ಕೋಶಾಧಿಕಾರಿಯಾಗಿ ಹಾಜಿ ಆಸಿಫ್ ಎಸ್.ಯು., ಉಪಾದ್ಯಕ್ಷರಾಗಿ ಅಬ್ದುಲ್ ಬಶೀರ್ ಟಿಂಬರ್, ಇರ್ಫಾನ್ ಎಸ್, ಸಂಚಾಲಕರಾಗಿ ಮಹಮ್ಮದ್ ಹನೀಫ್ ಬಿ.ಐ, ಹಾಜಿ ಬಿ.ಕೆ.ರವೂಫ್, ಸಲಹೆಗಾರರಾಗಿ ಇಕ್ಬಾಲ್ ಸಖಾಫಿ ಮರ್ ಝಾಕಿ, ಅಬೂಬಕ್ಕರ್ ಸಿದ್ದೀಕ್ ಅಝ್ಹರಿ, ಸಿದ್ದೀಕ್ ಜಿ.ಎಚ್, ಜೊತೆ ಕಾರ್ಯದರ್ಶಿಯಾಗಿ ಹಾರಿಶ್ ಎನ್.ಎ,ಅಬೂಬಕ್ಕರ್ ಪಾಲ್ಯ, ರಹಿಮಾನ್ ಜಿ, ಬಶೀರ್ ಎನ್.ಎ, ಮಹಮ್ಮದ್ ಫಯಾಝುದ್ದೀನ್ ಕೆ.ಎಮ್ ಮತ್ತು ಹಾಜರಿದ್ದ ಎಲ್ಲಾ ಜಮಾ ಅತ್ ಸದಸ್ಯರನ್ನು ಸೇರಿಸಿ ಉರೂಸ್ ಸಮಿತಿಯನ್ನು ರಚಿಸಲಾಯಿತು.