ಬೆಳ್ತಂಗಡಿ: ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲೆ ಲ. ಭಾರತಿ ಬಿ. ಎಂ. ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ನ. 23 ರಂದು ಅಧಿಕೃತ ಭೇಟಿ ನೀಡಲಿದ್ದು ತಾಲೂಕಿನಲ್ಲಿ ವಿವಿಧ ಕಡೆಗಳಲ್ಲಿ ರೂಪಾಯಿ 12 ಲಕ್ಷ ಮೊತ್ತದ ವಿವಿಧ ಸೇವಾ ಕಾರ್ಯಗಳ ಉದ್ಘಾಟನೆ ಮಾಡಲಿದ್ದಾರೆ ಎಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ದೇವದಾಸ್ ಶೆಟ್ಟಿ ಹೇಳಿದರು. ಅವರು ನ. 16 ರಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಬೆಳ್ತಂಗಡಿ ಲಯನ್ಸ್ ಕ್ಲಬ್ 51 ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು, ಈ ವರ್ಷ ಜುಲೈಯಿಂದ ಹಲವು ಸಮಾಜ ಮುಖಿ ಸೇವಾ ಕಾರ್ಯಗಳಾದ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಇಬ್ಬರಿಗೆ ತಲಾ 30 ಸಾವಿರ ಪ್ರೋತ್ಸಾಹ ನಿಧಿ, ಗುರುವಾಯನಕೆರೆ ಶಾಲೆಗೆ ಅತಿಥಿ ಶಿಕ್ಷಕರಿಗೆ ಗೌರವ ಧನ, ಕಣ್ಣಿನ ಚಿಕೆತ್ಸೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಧನ ಸಹಾಯ, ಕ್ರೀಡಾ ಕೂಟ, ವೃತ್ತಿ ಮಾರ್ಗದರ್ಶನ ತರಬೇತಿ, ಹಿರಿಯ ನಾಗರೀಕರಿಗೆ ಸನ್ಮಾನ, ವನ ಮಹೋತ್ಸವ, ವೃದ್ಧಾಶ್ರಮ ಮತ್ತು ಸಾನಿಧ್ಯ ಕೌಶಲ್ಯ ಕಲಾ ಕೇಂದ್ರ, ದಯಾ ವಿಶೇಷ ಶಾಲೆಗೆ ಆಹಾರ ಸಾಮಗ್ರಿ ವಿತರಣೆ, ಓಣಂ ಆಚರಣೆ, ಶಿಕ್ಷಕರಿಗೆ ಗೌರವಾರ್ಪಣೆ, ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ಶಿಬಿರ, ಗಾಲಿ ಕುರ್ಚಿ ವಿತರಣೆ, ಗಾಂಧಿ ಜಯಂತಿ, ಸ್ವಚ್ಛತೆ, ಕಾಪಿನಡ್ಕ, ಸವಣಾಲು ಶಾಲೆಗೆ ಕಂಪ್ಯೂಟರ್ ಕೊಡುಗೆ, ಉಚಿತ ಆಹಾರ ಕಿಟ್ ವಿತರಣೆ, ದೀಪಾವಳಿ ಆಚರಣೆ, ಬದ್ಯಾರ್ ನಿವಾಸಿಗೆ ಕೃತಕ ಕಾಲಿನ ವ್ಯವಸ್ಥೆ, ಅಂತರ್ರಾಷ್ಟ್ರೀಯ ಫೌಂಡೇಶನ್ ಗೆ ರೂ 5 ಲಕ್ಷ ದೇಣಿಗೆ ಮೊದಲಾದ ಸೇವಾ ಮಾಡುತ್ತಿದ್ದು, ರಾಜ್ಯಪಾಲರ ಭೇಟಿಯಂದು ಬದ್ಯಾರ್ ಕಾಪಿನಡ್ಕ, ಗುಂಡೇರಿ, ಪೇರಲ್ ತೇರಕಟ್ಟೆ ಗೇರುಕಟ್ಟೆ ಬಸ್ ತಂಗುದಾನಗಳ ಉದ್ಘಾಟನೆ, ಮತ್ತು ನವೀಕರಣ ಬಸ್ ನಿಲ್ದಾಣದ ಉದ್ಘಾಟನೆ, ಅಳದಂಗಡಿ ಸರಕಾರಿ ಕಾಲೇಜಿಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ, 25 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ, ಬಂಗಾಡಿ ಸರಕಾರಿ ಶಾಲೆಯ ಇ ಲ್ಯಾಬರೆಟರಿ ಉದ್ಘಾಟನೆ, ಇಂದಬೆಟ್ಟು ಶಾಲೆಗೆ ನವೀನ ರೀತಿಯ ಬಣ್ಣ, ಮುಡಾಯಿಬೆಟ್ಟು ಶಾಲೆಗೆ ಕಪಾಟು ಕೊಡುಗೆ, ಬಳಂಜ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗೆ ಟೇಬಲ್ ಹಸ್ತಾಂತರ ಮೊದಲಾದ ಸೇವಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಪೂರ್ವ ಅಧ್ಯಕ್ಷ ಅಶೋಕ್ ಕುಮಾರ್, ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ಸದಸ್ಯ ಲಕ್ಷ್ಮಣ ಪೂಜಾರಿ, ಮಾಧ್ಯಮ ಕಾರ್ಯದರ್ಶಿ ತುಕಾರಾಮ ಬಿ. ಉಪಸ್ಥಿತರಿದ್ದರು.