ಉಜಿರೆ: ಎಸ್.ಡಿ.ಯಂ . ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು) ರಾಜ್ಯ ಮಟ್ಟದ ಮತ್ತು ರೆಸ್ಟ್ ಆಫ್ ಬೆಂಗಳೂರು ವಲಯದ ನೆಟ್ಬಾಲ್ ಕ್ರೀಡಾ ಕೂಟ ನ.11 ಮತ್ತು 12ರಂದು ಅಯೋಜಿಸಲಾಗಿತ್ತು. ಕ್ರೀಡಾ ಕೂಟದ ಫಲಿತಾಂಶ ಇಂತಿದೆ.
ರೆಸ್ಟ್ ಆಫ್ ಬೆಂಗಳೂರು ವಲಯ ವಿಜೇತರು : ಪ್ರಥಮ ಸ್ಥಾನ: ಎಸ್.ಡಿ.ಯಂ. ಇನ್ಸ್ಟಿ ಟ್ಯೂ ಟ್ ಆಫ್ ಟೆಕ್ನಾಲಜಿ, ಉಜಿರೆ, ದ್ವಿತೀಯ ಸ್ಥಾನ: ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು , ಮಂಗಳೂರು.
ರಾಜ್ಯ ಮಟ್ಟ ವಿಜೇತರು :
ಪ್ರಥಮ ಸ್ಥಾನ: ಎಸ್.ಡಿ.ಯಂ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಉಜಿರೆ, ದ್ವಿತೀಯ ಸ್ಥಾನ: ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ, ಬೆಂಗಳೂರು, ತೃತೀಯ ಸ್ಥಾನ: ಆರ್.ವಿ. ಕಾ ಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು, ಚತುರ್ಥ ಸ್ಥಾನ: ಎಸ್.ಜೆ.ಬಿ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂ ರು
ಮೊದಲನೇ ದಿನದ ಕಾರ್ಯಕ್ರಮವನ್ನು ಎಸ್.ವಿ. ಪಿಯು ಕಾಲೇಜಿನ ದೈಹಿಕ ನಿರ್ದೇಶಕರಾದ ಶ್ರೀ ಪ್ರೇಮನಾಥ ಶೆಟ್ಟಿ ಉದ್ಘಾಟಿಸಿದರು. ಎರಡನೇ ದಿನದ ಉದ್ಘಾಟನೆಯನ್ನು ರಾಷ್ಟ್ರೀಯ ಮಟ್ಟದ ವೇಯ್ಟ್ ಲಿಫ್ಟ ರ್ ಶ್ರೀ ಮಂಜುನಾಥ್ ಮರಾಠಿ ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಪೂರನ್ ವರ್ಮಾ, ಸಿಇಒ, ಐಟಿ ಮತ್ತು ಹಾಸ್ಟೆಲ್ಗಳು, ಎಸ್.ಡಿ.ಯಂ . ಎಜುಕೇಶನಲ್ ಸೊಸೈಟಿ ಉಜಿರೆ ಅಧ್ಯಕ್ಷತೆ ವಹಿಸಿದ್ದರು .
ಪ್ರಾಂಶು ಪಾಲರಾದ ಡಾ. ಅಶೋಕ್ ಕುಮಾರ್ ಬಹುಮಾನ ವಿತರಸಿ ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಭಾಕರ್, ರಮೇಶ್, ನಿತಿನ್, ಸಹ ಪ್ರಾದ್ಯಾಪಕರಾದ ಡಾ. ಬಸವ, ಡಾ. ಕೃಷ್ಣ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎರಡು ದಿನದ ಕ್ರೀಡಾ ಕೂಟದಲ್ಲಿ ಇಂಜಿನಿಯರಿಂಗ್ ಕಾಲೇಜುಗಳ 14 ತಂಡಗಳು ಪಾಲ್ಗೊಂಡವು. ವಿದ್ಯಾರ್ಥಿಗಳಾದ ವಿಶ್ರುತಾ ಸ್ವಾಗತಿಸಿದರು ಹಾಗೂ ಮಾನ್ಯ , ಸಮೃದ್ಧಿ ಕಾರ್ಯಕ್ರಮ ನಿರ್ವಹಿಸಿದರು .