ಉಜಿರೆ: “ಎಂಪಿರಿಯಾ ಕಾರ್ಪೋರೇಶನ್” ಷೇರು ಮಾರುಕಟ್ಟೆಯ ಕೋಚಿಂಗ್ ಸೆಂಟರ್ ವತಿಯಿಂದ ಹೂಡಿಕೆ ಮಾಹಿತಿ ಕಾರ್ಯಾಗಾರ ಹಾಗೂ ಉದ್ದೇಶಿತ “ಗೋ ವರ್ಧನ ಗಿರಿ” ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಯ ಉದ್ಘಾಟನಾ ಪೂರ್ವ ಸಭೆಯನ್ನು ಉಜಿರೆ ಓಷಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಜರುಗಿತು. ಉದ್ಘಾಟನೆಯನ್ನು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಉಷಾಕಿರಣ್ ಕಾರಂತ್, ಯಂಗ್ ಚಾಲೆಂಜೆರ್ಸ್ ಕ್ರೀಡಾ ಸಂಘದ ಸ್ಥಾಪಕ ನಾಮದೇವ್ ರಾವ್, ಪ್ರಗತಿ ಪರ ಕೃಷಿಕ ನಾರಾಯಣ ಗೌಡ ದೇವಸ್ಯ, ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಹಾಗೂ ರಾಘವೇಂದ್ರ ಉಪಾಧ್ಯಾಯ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಷೇರು ಮಾರುಕಟ್ಟೆಯ ಪ್ರಾಥಮಿಕ ಅರಿವಿನ ಬಗ್ಗೆ ಮಾತನಾಡಿದ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಕಿಶನ್ ಅಚಾರ್ಯ ಭಾರತದಲ್ಲಿ ಷೇರು ಮಾರುಕಟ್ಟೆ ಹೂಡಿಕೆ ಪ್ರಮಾಣ ಕೇವಲ 3% ಇದ್ದು, ಇದರ ಮಾಹಿತಿ ಕೊರತೆಯಿಂದ ಬಹುದೊಡ್ಡ ಅವಕಾಶದಿಂದ ದೇಶದ ಜನರು ವಂಚಿತರಾಗಿದ್ದಾರೆ. ಷೇರು ಮಾರುಕಟ್ಟೆಯಲ್ಲಿರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಹೂಡಿಕೆಗಳ ಬಗ್ಗೆ ತಿಳಿಸಿ ಇದಕ್ಕಾಗಿ ಸರಳ ರೀತಿಯಲ್ಲಿ ಎಂಪೀರಿಯ ಕಾರ್ಪೊರೇಷನ್ ನ ಸ್ಥಾಪಕರು ನಿಶಾನ್ ಕೃಷ್ಣ ಭಂಡಾರಿ ಈ ಸಂಸ್ಥೆಯನ್ನು ಹುಟ್ಟು ಹಾಕಿ ಇಂದು ಸಾವಿರಾರು ಜನರು ಈ ಲಾಭವನ್ನು ಪಡೆದುಕೊಂಡ ಬಗ್ಗೆ ಅವರು ತಿಳಿಸಿಕೊಟ್ಟರು.
ಎಂಪೀರಿಯ ಕಾರ್ಪೊರೇಷನ್ ಸಂಸ್ಥಾಪಕ ನಿಶಾನ್ ಕೃಷ್ಣ ಭಂಢಾರಿ ಕೂಡ ತಮ್ಮ ಕನಸಿನ ಯೋಜನೆಗಳ ಬಗ್ಗೆ ತಿಳಿಸಿ ಸಹಕಾರ ಕೋರಿದರು. ಸಂಸ್ಥೆಯ ನಿರ್ದೇಶಕ ಚಂದ್ರಶೇಖರ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆಯೋಜಕರಾದ ರಾಮಚಂದ್ರ ಗೌಡ ಕಾನರ್ಪ, ನಂದೀಶ್ ಭಂಡಾರಿ ಮುಂಡಾಜೆ, ಚಂದ್ರಶೇಖರ ಕಾನರ್ಪ, ವಿಠಲ್ ಎಂ.ಕೆ ನಿಡ್ಲೆ, ರಾಘವೇಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹರೀಶ್ ನೆರಿಯ ಹಾಗೂ ವಿಠಲ ಕೊಕ್ಕಡ ನಿರ್ವಹಿಸಿದರು.