ಕಲ್ಮಂಜ: ಪ್ರೌಢ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

0

ಕಲ್ಮಂಜ: ಸರಕಾರಿ ಪ್ರೌಢ ಶಾಲೆ ವಾರ್ಷಿಕ ಕ್ರೀಡಾಕೂಟದಲ್ಲಿ ಅಮೃತ್ ಟೆಕ್ಟ್ ಟೈಲ್ಸ್ ನ ಮಾಲಕ ಪ್ರಶಾಂತ್ ಕ್ರೀಡಾಕೂಟವನ್ನು ದೀಪ ಪ್ರಜ್ವಲಿಸಿ ಉದ್ಘಾಟನೆಗೊಳಿಸಿ ಮಾತೃಋಣ ಪಿತೃಋಣ ಹೇಗೆ ನಾವು ತೀರಿಸಬೇಕೊ ಅದೇ ರೀತಿ ಸಮಾಜದ ಋಣವನ್ನೂ ನಾವು ತೀರಿಸಬೇಕು. ವಿದ್ಯೆ ಕಲಿಸಿದ ಶಾಲೆಯ ಅಭಿವೃದ್ಧಿಯಲ್ಲಿ ಸಹಕಾರ ನೀಡುವ ಮೂಲಕ ಶಾಲಾ ಋಣವನ್ನೂ ನಾವು ತೀರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯಶಿಕ್ಷಕಿ ಪೂರ್ಣಿಮಾ ಪ್ರಾಸ್ತಾವಿಸಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ವಸಂತಿ ಕಾರ್ಯಕ್ರಮ ನಿರೂಪಿಸಿ, ಆಂಗ್ಲಭಾಷಾ ಶಿಕ್ಷಕಿ ಪ್ರೇಮಲತಾ ಧನ್ಯವಾದವಿತ್ತರು. ಶಾಲಾ ನಾಯಕಿ ಮುಕ್ಷಿತಾ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಶಾಲಾ ಶಿಕ್ಷಕಿಯರಾದ ಸಾವಿತ್ರಿ,ˌಮಾಲಿನಿ ಹೆಗ್ಗಡೆ, ಹೇಮಲತಾ, ಸವಿತಾ,ˌಸುಧೀಂದ್ರ, ಪ್ರೇಮಾ ಯಚ್.ವಿ. ಸಹಕರಿಸಿದರು.

p>

LEAVE A REPLY

Please enter your comment!
Please enter your name here