ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ದೇವಸ್ಥಾನದ ಆಸ್ತಿ ಉಳಿಸಲು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಉದ್ಘಾಟನೆ

0

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಉಪಯೋಗಕ್ಕಾಗಿ ಖರೀದಿಸಿದ್ದ ಸ್ಥಿರಾಸ್ತಿಗಳನ್ನು ಖಾಸಗಿ ಟ್ರಸ್ಟ್ ಗೆ ಅಕ್ರಮವಾಗಿ ಹಸ್ತಾಂತರ ಮಾಡಿ ಅವ್ಯವಹಾರ ನಡೆಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ದೇವಾಲಯದ ಆಸ್ತಿಯನ್ನು ರಕ್ಷಿಸಬೇಕೆಂದು ನ.11ರಿಂದ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನದ ಎದುರು ಬೆಳಗ್ಗೆ 10.00 ಗಂಟೆಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ದೇವರ ಮುಂದೆ ಪ್ರಾರ್ಥನೆ ನೆರವೇರಿಸಿ ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ನ ಲಕ್ಷ್ಮೀಶ ಗಬಲಾಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಯೋಗೀಶ್ ಕುಮಾರ್ ನಡಕ್ತರ, ಕೊಕ್ಕಡ ವಲಯ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ತುಕ್ರಪ್ಪ ಶೆಟ್ಟಿ, ಉದ್ಯಮಿ ನಾಗೇಶ್ ಕುಮಾರ್, ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ, ಧರ್ಮರಾಜ ಗೌಡ ಅಡ್ಕಾಡಿ, ದ.ಕ ಹವ್ಯಾಸ ಬಂಧುಗಳ ಮಾಣಿ ಮಠದ ವೈದಿಕ ಕೇಶವ ಪ್ರಸಾದ್, ವಿಶ್ವನಾಥ ಶೆಟ್ಟಿ ನೆಲ್ಯಾಡಿ , ನೆ ಲ್ಯಾಡಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸರ್ವೋತ್ತಮ ಗೌಡ, ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಕೊಕ್ಕಡ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಉಪಾಧ್ಯಕ್ಷ ಪ್ರಶಾಂತ್ ರೈ, ಕಾರ್ಯದರ್ಶಿ ಶ್ಯಾಮರಾಜ್, ಕೋಶಾಧಿಕಾರಿ ವಿಶ್ವನಾಥ್ ಕೊಲ್ಲಾಜೆ, ಸಾಮಾಜಿಕ ಮುಖಂಡ ಬಿ ಎಂ ಭಟ್, ಗೋಪಾಲ ಕೃಷ್ಣ ಭಟ್, ಕೃಷ್ಣ ಭಟ್ ಕುಡ್ತಲಾಜೆ, ಸುನೀಶ್ ನಾಯ್ಕ, ದಯಾನೀಶ್ ಕೊಕ್ಕಡ, ಗಣೇಶ್ ಕಾಶಿ, ಲಕ್ಷ್ಮೀನಾರಾಯಣ ಉಪ್ಪರ್ಣ, ಗೋಪಾಲ ಕೃಷ್ಣ ಭಟ್ ಮುನ್ನಡ್ಕ, ಜಾರಪ್ಪ ಗೌಡ ಸಂಕೇಶ, ಎ.ಎನ್.ಶಬರಾಯ, ಚರಣ್ ಕೊಕ್ಕಡ, ಪದ್ಮನಾಭ ಆಚಾರ್ಯ, ಗಣೇಶ್ ಪಿ.ಕೆ, ಧನಂಜಯ ಗೌಡ ಪಟ್ರಮೆ, ಧರ್ಮರಾಜ್ ಅಡ್ಕಾಡಿ, ಶೀನ ನಾಯ್ಕ, ಲಕ್ಷ್ಮಿನಾರಾಯಣ, ಕೃಷ್ಣಪ್ಪ ಗೌಡ ಪೂವಾಜೆ, ವಿಶ್ವನಾಥ ಮೀಯಾಳ, ಗಣೇಶ್ ಪೂಜಾರಿ, ಜಯಂತ ಗೌಡ ಮಾಸ್ತಿಕಲ್ಲು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಡಾ. ರಾಜಾರಾಮ್ ಕೆ.ಬಿ. ಹಾಲಿ ಸದಸ್ಯ ವೆಂಕಪ್ಪ ಪೂಜಾರಿ, ಬೆಳ್ತಂಗಡಿ ಗುರು ನಾರಾಯಣ ಸೇವಾ ಸಂಘದ ಜಯ ವಿಕ್ರಮ, ಈ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ರೂಪೇಶ್ ರೈ ಆಲಿಮಾರ್, ಪ್ರಗತಿಪರ ಕೃಷಿಕ ಯೋಗೀಶ್ ಕೋಡಿಂಬಾಡಿ, ಶಿವಪ್ರಸಾದ್, ಪ್ರಭಾಕರ ಸಾಮಾನಿ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಮಾಜಿ ಸದಸ್ಯ ದಾಮೋದರ ಶೆಟ್ಟಿ ನೂಜೆ ಮೊದಲಾದವರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here