ರೆಖ್ಯ: ಹಿಂದೂ ರಾಷ್ಟ್ರ ಜಾಗೃತಿ ಸಭೆ ನ. 10ರಂದು ಗುಡ್ರಾದಿ ಗುಡ್ರಾಮಲ್ಲೇಶ್ವರ ಸಭಾ ವೇದಿಕೆಯಲ್ಲಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಶ್ವಿನಿ ನಾಯಕ್, ಈಶ್ವರ ಕೊಠಾರಿ, ಚಂದ್ರ ಮೊಗವೀರ್ ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಹಿಂದುತ್ವಕ್ಕಾಗಿ ಕಾರ್ಯ ನಿರ್ವಹಿಸಿದ ಕೈಕುರೆ ಮಂಜುನಾಥ್ ಗೌಡ ಹಾಗೂ ಎಸ್ ಕೆ ಡಿ ಆರ್ ಡಿ ಪಿ ಪ್ರಾದೇಶಿಕ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅಶ್ವಿನಿ ನಾಯಕ್ ಸನಾತನ ಧರ್ಮ ಎದುರಿಸುತ್ತಿರುವ ಸಮಸ್ಯೆಗಳ ಹಾಗೂ ಅದಕ್ಕೆ ಪರಿಹಾರ ವಿಷಯವಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ನ್ಯಾಯವಾದಿ ಈಶ್ವರ ಕೊಠಾರಿ ಹಿಂದೂ ಸಂಘಟನೆಯ ಅವಶ್ಯಕತೆ ವಿಷಯವಾಗಿ ಮಾತನಾಡಿದರು.
ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಧಿಕಾರಿ ಚಂದ್ರ ಮೊಗೇರ ಹಿಂದೂ ರಾಷ್ಟ್ರದ ಅವಶ್ಯಕತೆ ಕುರಿತು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರೆಖ್ಯ ಹಿಂದೂ ಜನಜಾಗೃತಿ ಸಮಿತಿಯ ಸರ್ವ ಸದಸ್ಯರು, ಗುಡ್ರಾ ಮಲ್ಲೇಶ್ವರ ದೇವಳದ ಅಧ್ಯಕ್ಷ ಮಂಜುನಾಥ್ ಗೌಡ ಕೈಕುರೆ, ಜಯರಾಮ್ ನೆಲ್ಲಿತ್ತಾಯ,ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್, ಉಪಾಧ್ಯಕ್ಷ ರಾಜು ಸಾಲ್ಯಾನ್, ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧೀನ್ ಡಿ, ಅರಸಿನಮಕ್ಕಿ ಪಂಚಾಯತ್ ನಿಕಟ ಪೂರ್ವಧ್ಯಕ್ಷ ನವೀನ್ ರೆಖ್ಯ, ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಂ ಎಸ್, ಕರುಣಾಕರ ಶಿಶಿಲ, ಗಣೇಶ್ ಕೆ ಹೊಸ್ತೋಟ, ಸಿ ಎ ಬ್ಯಾಂಕ್ ನಿರ್ದೇಶಕ ಬೇಬಿ ಕಿರಣ್ ಹಾಗೂ ಸುತ್ತಮುತ್ತಲಿನ ಗ್ರಾಮದ ಅನೇಕ ಜನರು ಭಾಗವಹಿಸಿದ್ದರು.
ಸ್ವಾಗತ ಮತ್ತು ನಿರೂಪಣೆಯನ್ನು ಮಾಧವಿ ಪೈ, ಶಂಕನಾದವನ್ನು ಶಶಿಧರ್ ಮಾಕಳ, ಕರುಣಾಕರ್ ಅಭ್ಯಂಕರ್ ವೇದ ಮಂತ್ರ ಪಠಣ ಮಾಡಿದರು. ಸಮಿತಿಯ ಪರಿಚಯವನ್ನು ಹರೀಶ್ ಬೆಳಾಲು ನಿರ್ವಹಿಸಿದರು. ಧನ್ಯವಾದವನ್ನು ಪ್ರಶಾಂತ್ ಏನ್ಮಾಡಿ ನೆರವೇರಿಸಿದರು.