ಉಜಿರೆ:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಶೈಕ್ಷಣಿಕ ಕಾರ್ಯಕ್ರಮ ನ.8 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಧ.ಮ.ಪ.ಪೂ. ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕ ಮಹಾವೀರ ಜೈನ್ ಮಾತನಾಡಿ ಗ್ರಾಮೀಣ ಆಟಗಳು, ಗ್ರಾಮೀಣ ಕ್ರೀಡೆಗಳ ಬಗ್ಗೆ ಒಂದಷ್ಟು ಮಹತ್ವದ ಮಾಹಿತಿಯನ್ನು ನೀಡಿ ಗ್ರಾಮೀಣ ಕ್ರೀಡೆಗಳನ್ನು ನೆನಪು ಮಾಡುವ ಮೂಲಕ ಒಂದಷ್ಟು ಕ್ರೀಡೆಗಳನ್ನು ನಡೆಸಿ, ಇಂದಿನ ಆಟಗಳ ಬಗ್ಗೆ ನೆನಪು ಮಾಡಲಾಯಿತು, ಗ್ರಾಮೀಣ ಕ್ರೀಡೆಗೆ ಆಸಕ್ತಿ ನೀಡುವಂತೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಹರು ಯುವ ಕೇಂದ್ರ ಮಂಗಳೂರು ತಾಲೂಕು ಸಂಯೋಜಕ ತೀಕ್ಷಿತ್ ಕೆ. ಕಲ್ಬೆಟ್ಟು ವಹಿಸಿದ್ದರು. ಅವರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಅಂಶಗಳನ್ನು ತೆಗೆದುಕೊಂಡು ತನ್ನನ್ನು ತಾನು ತೊಡಗಿಸಿಕೊಂಡು ಸಮಯ ಪಾಲನೆ ಹಾಗೂ ಶಿಸ್ತು ವೈಯಕ್ತಿಕ ವೃತ್ತಿ ಜೀವನ ಜೊತೆಗೆ ಸೊಲ್ಪ ಸಮಯವನ್ನು ರಾಷ್ಟ್ರೀಯ ಕಾರ್ಯದಲ್ಲಿ ಕೂಡ ಕೈಜೋಡಿಸುವಂತೆ ಶಿಬಿರಾರ್ಥಿಗಳಿಗೆ ತಿಳಿಸಿದರು.
ಗ್ರಾಮೀಣ ಕ್ರೀಡಾಕೂಟದ ಭಿತ್ತಿಪತ್ರಿಕೆ ಅನಾವರಣವನ್ನು ಮೋಹನ ಕಿಲ್ಲೂರು ಇವರು ನೆರವೇರಿಸಿದರು. ಕಿಲ್ಲೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಜಯಶ್ರೀ, ಕಿಲ್ಲೂರು ಎಸ್.ಡಿ.ಎಂ.ಸಿ ಸದಸ್ಯರಾದ ಗಿರೀಶ್ ಗೌಡ,
ಚಂದ್ರಶೇಖರ ಮಾಲೂರು ಹಾಗೂ ಈ ಸಂದರ್ಭದಲ್ಲಿ ಯೋಜನಾಧಿಕಾರಿಗಳಾದ ಡಾ. ಪ್ರಸನ್ನಕುಮಾರ್ ಐತಾಳ್ ಮತ್ತು ಸಹಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದರು.