ಗುರುವಾಯನಕೆರೆ: ವಿಧಿವಿಜ್ಞಾನ ಕ್ಷೇತ್ರ ಉದ್ಯೋಗಕ್ಕಾಗಿ ನಡೆಸಿದ ಫೋರೆನ್ಸಿಕ್‌ ಸೈನ್ಸ್‌ ಅರ್ಹತಾ ಪರೀಕ್ಷೆ- ಎಕ್ಸೆಲ್ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

0

ಗುರುವಾಯನಕೆರೆ: ಸಾಧನೆಗಳ ಮೂಲಕ ರಾಜ್ಯದ ಶೈಕ್ಷಣಿಕ ಭೂಪಟದಲ್ಲೇ ಅನನ್ಯ ಸ್ಥಾನಗಳಿಸಿದ ಧರ್ಮಸ್ಥಳದ ಹತ್ತಿರವಿರುವ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಇನ್ಫಿನಿಟಿ ಲರ್ನಿಂಗ್ ಫೌಂಡೇಶನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಕ್ಸೆಲ್ ಪದವಿ ಪೂರ್ವ ವಿದ್ಯಾಸಂಸ್ಥೆಯು ನೀಟ್, ಜೆ.ಇ.ಇ, ಸಿಇಟಿ, ನಾಟ ಮುಂತಾದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳನ್ನು ಸಾಧಕರಾಗುವಂತೆ ಮಾಡಿ ರಾಷ್ಟ್ರದಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಇದರ ಜೊತೆಗೆ ವಿಜ್ಞಾನ ಕ್ಷೇತ್ರದ ವಿವಿಧ ವೃತ್ತಿಪರ, ಕೌಶಲ್ಯಯುತ ತರಬೇತಿಗಳನ್ನು ನೀಡುತ್ತಾ , ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಶಾಕಿರಣವಾಗಿದೆ.

ವಿಧಿ ವಿಜ್ಞಾನ ಕ್ಷೇತ್ರಕ್ಕಾಗಿ ಇನ್ಸ್ಟಿಟ್ಯೂಟ್ ಆಫ್ ಫೋರೆನ್ಸಿಕ್‌ ಸೈನ್ಸ್‌ ನಡೆಸಿದ ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸಿದ ಎಕ್ಸೆಲ್ ನ ಎಲ್ಲಾ ವಿದ್ಯಾರ್ಥಿಗಳು ಅತ್ಯತ್ತಮ ಸಾಧನೆಯನ್ನು ಮಾಡಿರುತ್ತಾರೆ. ವಿದ್ಯಾರ್ಥಿಗಳಾದ ಮನೋಜ್ಞಾ ಎಸ್., ಸಂಜನಾ ಎಲ್., ಐಶ್ವರ್ಯ ಗೋಪಿ, ಶಿಫ್ರಾ ಸರಿನಾ ಮಾಬೆನ್, ತುಶಿತಾ ಜಿ.ಸಿ., ಚಿಂತನ ಕೆ. ಆರ್., ಕೀರ್ತನ್ ಜಿ., ಚಿರಾವಿ ಎಂ.ಆರ್. ಇವರು ಉತ್ತಮ ಫಲಿತಾಂಶವನ್ನು ಪಡೆದುಕೊಂಡು ಸಾಧನೆ ಮೆರೆದಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚು ಸರಕಾರಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಸೀಟುಗಳನ್ನು ಪಡೆದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಎಕ್ಸೆಲ್ ಪದವಿ ಪೂರ್ವ ಕಾಲೇಜು ಗ್ರಾಮೀಣ ಭಾಗದ ಮತ್ತು ನಗರದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ವೈದ್ಯರಾಗುವ ಕನಸಿಗೆ ಸದಾ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ.

p>

LEAVE A REPLY

Please enter your comment!
Please enter your name here