ಬೆಳಾಲು: ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿಯ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುತ್ತಿರುವ 42 ನೇ ವರ್ಷ ಆಟೋಟ ಸ್ಪರ್ಧೆಯ ಉದ್ಘಾಟನೆ ನ. 3 ರಂದು ಶ್ರೀ ಮಾಯ ಮಹಾದೇವ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾಯ ಮಹದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಹೆಚ್. ಪದ್ಮ ಗೌಡ, ಬೆಳಾಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶಿವಕುಮಾರ್ ಬಾರಿತ್ತಾಯ, ಭಜನಾ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ ಸಾಲಿಯಾನ್, ಪೊಲೀಸ್ ಇಲಾಖೆ ಚಿದಾನಂದ ಉರೆಜ್ಜ, ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್, ಭಾಗವಹಿಸಿದ್ದರು.
ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯ ಕುದ್ರಾಲು ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಸಂಚಾಲಕ ರಂಜನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಜನಾ ಮಂಡಳಿಯ ಕಾರ್ಯದರ್ಶಿ ಶಿವಪ್ರಸಾದ್ ಕಪ್ಪೆಲ್ಲ ಸ್ವಾಗತಿಸಿ, ವಿಜೇತರ ಪಟ್ಟಿ ವಾಚಿಸಿದರು. ಭವಾನಿ ಮಾರ್ಪಲು ದಾನಿಗಳ ವಿವರ ನೀಡಿದರು. ಜೊತೆ ಕಾರ್ಯದರ್ಶಿ ಶೋಭಿತ್ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಮಹೇಶ್ ಪುಳಿತ್ತಡಿ ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂಡಳಿಯ ಪದಾಧಿಕಾರಿಗಳು, ಮಾಯ ಫ್ರೆಂಡ್ಸ್, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ತೀರ್ಪುಗಾರರು, ಊರವರು ಉಪಸ್ಥಿತರಿದ್ದು ಸಹಕರಿಸಿದರು.
ಸನ್ಮಾನ
ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಪುಳಿತ್ತಡಿ ಲಕ್ಷ್ಮಣ ಗೌಡ, ಪ್ರಸೂತಿ ತಜ್ಞೆ ಗಿರಿಜಾ
ದೇರೆಮಾರು, ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ಮೋಕ್ಷಿತ್ ಕೊಲ್ಲಿಮಾರು, ಅಮೂಲ್ಯ ಪುಚ್ಚೆಹಿತ್ಲು ಇವರನ್ನು ಸನ್ಮಾನಿಸಲಾಯಿತು.