ಬೆಳ್ತಂಗಡಿ: ಎಸ್.ಡಿ.ಎಂ. ಆಂಗ್ಲ ಮಾದ್ಯಮ ಶಾಲೆ ಉಜಿರೆ ಹಾಗೂ ಬಳಂಜ ಶಾಲೆಯಲ್ಲಿ ನಡೆದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಹರ್ಷಾ ಉದ್ಧ ಜಿಗಿತದಲ್ಲಿ ಪ್ರಥಮ, ಶ್ರಾವ್ಯ ಎತ್ತರ ಜಿಗಿತದಲ್ಲಿ ಹಾಗೂ ತ್ರಿಪಲ್ ಜಂಪ್ ನಲ್ಲಿ ದ್ವಿತೀಯ, ಡಿಯೋನ್ ಪ್ರಿನ್ಸ್ ತ್ರಿಪಲ್ ಜಂಪ್ ನಲ್ಲಿ ದ್ವಿತೀಯ, ಚೇತನ್ 200ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶ್ರೇಯಾ 600 ಹಾಗೂ 400 ಮೀ. ಓಟದಲ್ಲಿ ತೃತೀಯ, ಪ್ರತೀಕ್ಷಾ 3000ಮೀ. ಓಟದಲ್ಲಿ ತೃತೀಯ ಹಾಗೂ 4X100ಮೀ. ರಿಲೇ ಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಕೇವನ್ ತರಬೇತಿ ನೀಡಿರುತ್ತಾರೆ.
p>