ಬೆಳ್ತಂಗಡಿ: ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕ ಅವಿರೋಧ ಆಯ್ಕೆ

0

ಬೆಳ್ತಂಗಡಿ: ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿರುವ ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಎಲ್ಲ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ೧೧ ಸ್ಥಾನಗಳಿಗೆ ಹಾಲಿ ಅಧ್ಯಕ್ಷರಾಗಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಉಮೇಶ್ ಎ.ಬಿ., ಗಂಗಾಧರ ಮಿತ್ತಮಾರು, ಬಿ.ಎಂ. ಅಬ್ದುಲ್ ಹಮೀದ್, ಜಗದೀಶ್ ಹೆಗ್ಡೆ, ರಾಘ್ನೇಶ್, ಶೈಲೇಶ್ ಕುಮಾರ್ ಕುರ್ತೋಡಿ, ವಿ.ರಮೇಶ್ ಪೂಜಾರಿ, ಕೆ.ಎಸ್. ಯೋಗೀಶ್ ಕುಮಾರ್ ನಡಕ್ಕರ, ಕೆ.ಮೋಹನ ಶೆಟ್ಟಿಗಾರ್ ಉಜಿರೆ, ಎ.ರಾಮಚಂದ್ರ ಭಟ್ ಮುಂಡಾಜೆ, ಎರಡು ಮಹಿಳಾ ಮೀಸಲು ಸ್ಥಾನಕ್ಕೆ ಉಷಾ ಶರತ್ ಪುತ್ತಿಲ, ಜೆಸಿಂತಾ ಮೋನಿಸ್ ಮೇಲಂತಬೆಟ್ಟು, ಹಿಂದುಳಿದ ವರ್ಗ ಎ ಸ್ಥಾನಕ್ಕೆ ಅಭಿನಂದನ್ ಹರೀಶ್ ಕುಮಾರ್, ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಕೆ.ರಾಮಚಂದ್ರ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಕಾರ ಸಂಘಗಳ ಸಹಾಯಕ ಲೆಕ್ಕಪರಿಶೋಧನಾ ಕಚೇರಿಯ ನವೀನ್ ಕುಮಾರ್ ಎಸ್. ಚುನಾವಣಾ ಅಧಿಕಾರಿಯಾಗಿದ್ದರು.

p>

LEAVE A REPLY

Please enter your comment!
Please enter your name here