ಬೆಳ್ತಂಗಡಿ: ಆದರ್ಶ ಕ್ರಿಕೆಟರ್ಸ್ ನಾಲ್ಕೂರು ಇವರ ನೇತೃತ್ವದಲ್ಲಿ ಆದರ್ಶ ಟ್ರೋಫಿ ಕ್ರಿಕೆಟ್ ಪಂದ್ಯಾಟ ಅ.27ರಂದು ಸೂಳಬೆಟ್ಟು ದೇವಸ್ಥಾನದ ಮೈದಾನದಲ್ಲಿ ನಡೆಯಿತು.
ಉದ್ಘಾಟನೆಯನ್ನು ಹಾಲು ಉತ್ಪಾಕರ ಸಂಘದ ಅಧ್ಯಕ್ಷ ನಿರಂಜನ ಜೋಶಿ ಸೂಳಬೆಟ್ಟು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳoಜ ಗ್ರಾ. ಪಂ.ಸದಸ್ಯ ರವೀಂದ್ರ ಅಮೀನ್, ಅಳದಂಗಡಿ ಗ್ರಾ. ಪo. ಪ್ರಶಾಂತ ವೇಗಸ್, ಮುರಳಿದಾರ ಗೋಕಲೆ ಸೂಳಬೆಟ್ಟು, ಹರೀಶ್ ಪೂಜಾರಿ ಮಜಲು, ಗುರುವಾಯನಕೆರೆ ಗ್ರಾಮೀಣ ವಿಕಾಸ ಬ್ಯಾಂಕ್ ನಿರ್ದೇಶಕ ಪ್ರವೀಣ್ ಚಂದ್ರ ಮಹೇಂದಲೆ ಹಾಗೂ ಆದರ್ಶ ನಾಲ್ಕೂರಿನ ಹಿರಿಯ ಮಾಲಕ ಅನಂತ ಮರಟೆ ಅವರನ್ನು ಗೌರವಿಸಲಾಯಿತು.
ಸಂಜೆ ಸಮಾರೋಪ ಸಮಾರಂಭದಲ್ಲಿ ಬೆಳ್ತಂಗಡಿ ಸ್ವಾತಿ ಡೆಂಟಲ್ ಕ್ಲಿನಿಕ್ ನ ಶಶಿಧರ ಡೋಂಗ್ರೆ, ಅಳದಂಗಡಿ ಸುವರ್ಣ ಕ್ಲಿನಿಕ್ ನ ಹರಿಪ್ರಸಾದ್ ಸುವರ್ಣ, ಆನಂದ ಪೂಜಾರಿ ಬರಯ, ದಿನೇಶ್ ಪೂಜಾರಿ, ಸಂಜೀವ ಪೂಜಾರಿ, ಮೋಹನ ಹೆಗ್ಡೆ, ಅರುವ ಪುಷ್ಪ ಕೇಂದ್ರದ ಶ್ರೀಕಾಂತ್, ಆದರ್ಶ ಕ್ರಿಕೆಟರ್ಸ್ ನಾಲ್ಕೂರು ಜೋಯಲ್ ಮಾಲಕರು ಉಪಸ್ಥಿತರಿದ್ದರು.
ಪ್ರಥಮ ಸ್ಥಾನವನ್ನು ಪ್ಲವರ್ ಡೆಕೋರೆಟರ್ಸ್ ಅರ್ವ, ದ್ವಿತೀಯ ಸ್ಥಾನ ಆದರ್ಶ ನಾಲ್ಕೂರು, ತೃತೀಯ ಸ್ಥಾನವನ್ನು ಎವರಿಶೈನ್ ಅರುವ ಪಡೆದುಕೊಂಡರು.