ಓಡಿಲ್ನಾಳ: ಬಂಟರ ಸಂಘದ ಸಮಾಲೋಚನಾ ಸಭೆ, ಗ್ರಾಮ ಸಮಿತಿ ರಚನೆ

0

ಬೆಳ್ತಂಗಡಿ: ಅ.27ರಂದು ಬೆಳ್ತಂಗಡಿ ತಾಲೂಕು ಓಡಿಲ್ನಾಳ ಗ್ರಾಮ ಕುಂಡಳಿಕೆ ವಿಠಲ ಶೆಟ್ಟಿ ಅವರ ಮನೆಯಲ್ಲಿ ಓಡಿಲ್ನಾಳ ಗ್ರಾಮದ ಬಂಟರ ಸಂಘದ ಸಮಾಲೋಚನಾ ಸಭೆ ಹಾಗೂ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ನಮ್ಮ ಬಂಟ ಸಮುದಾಯದ ಪ್ರತಿಯೊಂದು ಮನೆಯ ಸದಸ್ಯರು ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಬಂಟ ಸಮುದಾಯದ ಯುವ ಪೀಳಿಗೆಗೆ ಉತ್ತಮ ವಿದ್ಯೆ, ಸಂಸ್ಕೃತಿ, ಸಂಸ್ಕಾರ, ಆಚರಣೆ ಬಗ್ಗೆ ಪೋಷಕರು ತಿಳಿಸಿ ಕೊಡುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು ಎಂದು ಮುಖ್ಯ ಅತಿಥಿ ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಹೇಳಿದರು.

ಓಡಿಲ್ನಾಳ ಬಂಟರ ಸಂಘದ ಮಾಜಿ ಸ್ಥಾಪಕ ಅಧ್ಯಕ್ಷ ಬಾಲಕೃಷ್ಣ ಪೂಂಜ ಅಧ್ಯಕ್ಷತೆಯನ್ನು ವಹಿಸಿದ್ದರು. ಸುರೇಶ್ ಶೆಟ್ಟಿ ಲಾಯಿಲ, ನವೀನ್ ಸಾಮಾನಿ ಕರಂಬಾರು, ಜಯರಾಮ ಭಂಡಾರಿ, ಸೀತಾರಾಮ ಶೆಟ್ಟಿ ಕಂಬರ್ಜೆ, ಕಿರಣ್ ಶೆಟ್ಟಿ, ರಾಜು ಶೆಟ್ಟಿ ಬೆಂಗತ್ಯಾರು, ಅಜಿತ್ ಜಿ. ಶೆಟ್ಟಿ ಕೊರಿಯಾರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು. ಪ್ರಭಾಕರ ಶೆಟ್ಟಿ ಉಪ್ಪಡ್ಕ ಪ್ಕಸ್ತಾವಿಕವಾಗಿ ಮಾತನಾಡಿದರು. ಸಹ ಸಂಚಾಲಕ ಸತೀಶ್ ಶೆಟ್ಟಿ ಕುಂಞಲೊಟ್ಟು, ನಿಕಟ ಪೂರ್ವ ಅಧ್ಯಕ್ಷ ವಸಂತ ಶೆಟ್ಟಿ ಮಠ, ಬೆಳ್ತಂಗಡಿ ಬಂಟರ ಸಂಘದ ಪದಾಧಿಕಾರಿಗಳು ಹಾಗೂ ಓಡಿಲ್ನಾಳ ಬಂಟ ಸಮುದಾಯ ಸಂಘದ ಸದಸ್ಯರು ಮತ್ತಿತರಿದ್ದರು.

ಆನಂದ ಶೆಟ್ಟಿ ಐಸಿರಿ ಸ್ವಾಗತಿಸಿದರು. ವಿಠ್ಠಲ ಶೆಟ್ಟಿ ಉಪ್ಪಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮಿಥಿಲ, ನಿವೇದಿತಾ, ಕೃತಿಕಾ ಪ್ರಾರ್ಥನೆ ಹಾಡಿದರು.

ನೂತನ ಸಮಿತಿಯಲ್ಲಿ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ಸಂಬೋಳ್ಯ, ಕಾರ್ಯದರ್ಶಿ ಪುರಂದರ ಶೆಟ್ಟಿ ಮುಂಗೇಲು, ಕೋಶಾಧಿಕಾರಿ ಅಭಿರತ್ ಶೆಟ್ಟಿ ಮುಡೈಲು, ಮಹಿಳಾ ಸಂಘದ ಉಪಾಧ್ಯಕ್ಷೆ ರಂಜಿತಾ ವಿ. ಶೆಟ್ಟಿ ಮೈರಳಿಕೆ, ಕಾರ್ಯದರ್ಶಿ ವನಿತಾ ಜೆ.ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾದರು.

p>

LEAVE A REPLY

Please enter your comment!
Please enter your name here