ಬೆಳ್ತಂಗಡಿ: ತಾಲೂಕು ಬಂಟರ ಯಾನೆ ನಾಡವರ ಸಂಘದ ನಿರ್ದೇಶಕರ ಹಾಗೂ ವಿಶೇಷ ಆಹ್ವಾನಿತರ ಸಭೆ- ”ಬಂಟೆರೆ ತುಡರ್ ಪರ್ಬ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ನಿರ್ದೇಶಕರ ಹಾಗೂ ವಿಶೇಷ ಆಹ್ವಾನಿತರ ಸಭೆಯು ಅ.27ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ಜಯಂತ ಶೆಟ್ಟಿ ಮಡಂತ್ಯಾರು ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯದರ್ಶಿ ಸುರೇಶ್‌ ಶೆಟ್ಟಿ ವರದಿ ವಾಚಿಸಿ ಸದಸ್ಯತನ ಅರ್ಜಿಗಳ ವಿವರವನ್ನು ಸಭೆಯ ಮುಂದಿಟ್ಟರು. ಸಂಘದ ಕೋಶಾಧಿಕಾರಿ ವಸಂತ್ ಶೆಟ್ಟಿ ಶ್ರದ್ಧ ತಿಂಗಳ ಲೆಕ್ಕಪತ್ರವನ್ನು ಮಂಡಿಸಿದರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಲೆಕ್ಕಪತ್ರವನ್ನು, ವಿದ್ಯಾನಿಧಿ ಸಂಚಾಲಕ ಅಜಿತ್‌ ಜಿ. ಶೆಟ್ಟಿ ಮಂಡಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ, ಮಹಿಳಾ ಬಂಟರ ವಿಭಾಗ ಹಾಗೂ ಯುವ ಬಂಟರ ವಿಭಾಗ ಆಶ್ರಯದಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಾಚರಣೆ ಪ್ರಯುಕ್ತ “ಬಂಟೆರೆ ತುಡರ್ ಪರ್ಬ” ನ.3ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆಯಲಿದೆ.

ಅಪರಾಹ್ನ ಗಂಟೆ 3.00ಕ್ಕೆ ದೀಪ ಪ್ರಜ್ವಲನೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷೆ ಶಾರದಾ ರೈ ಕಣಿಯೂರು ನೆರವೇರಿಸಲಿದ್ದಾರೆ. ಅಪರಾಹ್ನ ಗಂಟೆ 3.15ರಿಂದ ಬಂಟರ ಮಹಿಳಾ ವಿಭಾಗದ ಸದಸ್ಯರಿಂದ ಭಜನಾ ಕಾರ್ಯಕ್ರಮ, ಸಂಜೆ ಗಂಟೆ 4.30ಕ್ಕೆ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬೆಳ್ತಂಗಡಿ ಬಂಟರ ಮಹಿಳಾ ವಿಭಾಗ ಅಧ್ಯಕ್ಷೆ ಜಯಲಕ್ಷ್ಮಿಎನ್. ಸಾಮಾನಿ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ, ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಬೆಂಗಳೂರು ಕ್ವಾರಿ ಸ್ಟೋನ್‌ ಕ್ರಶ‌ರ್ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಭಾಗವಹಿಸಲಿದ್ದಾರೆ. ಸಂಜೆ ಗಂಟೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ಗಂಟೆ 7.00ರಿಂದ ದೀಪಾರಾಧನೆ, ಗೋಪೂಜೆ, ಬಲಿಯೇಂದ್ರ ಪೂಜೆ, ಸುಡುಮದ್ದು ಪ್ರದರ್ಶನ ಮತ್ತು ಸಹಭೋಜನ ನಡೆಯಲಿದೆ.

ಆಹ್ವಾನಿತರ ಸಭೆಯಲ್ಲಿ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ವತಿಯಿಂದ ನಡೆಯುವ ಬಂಟೆರೆ ತುಡರ್ ಪರ್ಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಂಘದ ಮಾಜಿ ಅಧ್ಯಕ್ಷ ಟಿ. ಆರ್. ಅಡ್ಯಂತಾಯ ಬಿಡುಗಡೆಗೊಳಿಸಿದರು.

ವಲಯ ಸಮಿತಿ ಹಾಗೂ ಗ್ರಾಮ ಸಮಿತಿಗಳ ಸಂಘಟನೆಯ ಬಗ್ಗೆ ಸಂಘಟನಾ ಸಂಚಾಲಕ ರಘುರಾಮ್ ಶೆಟ್ಟಿ ಸಾಧನ ಸಭೆಗೆ ವಿವರ ನೀಡಿದರು. ಉಪಾಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ಸ್ವಾಗತಿಸಿದರು. ಸಂಘದ ಜೊತೆ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ ಧನ್ಯವಾದ ನೀಡಿದರು.

p>

LEAVE A REPLY

Please enter your comment!
Please enter your name here